ಬೆಂಗಳೂರು: ಐಪಿಎಲ್ 2025ರ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೂತನ ಕ್ಯಾಪ್ಟನ್ ಘೋಷಿಸಿದೆ. ರಜತ್ ಪಾಟೀದಾರ್ ಅವರನ್ನು ನೂತನ ನಾಯಕನನ್ನಾಗಿ ನೇಮಿಸಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಕೋಚ್ ಆಂಡಿ ಫ್ಲವರ್ ಮತ್ತು ನಿರ್ದೇಶಕ ಮೋ ಬೊಬಾಟ್ ಅವರು ನಾಯಕನನ್ನು ಘೋಷಿಸಿದರು.
ಒಂದೇ ಒಂದು ಟ್ರೋಫಿ ಗೆಲ್ಲಲು ವಿಫಲವಾಗಿರುವ ಆರ್ಸಿಬಿ ಇದೀಗ 18ನೇ ಆವೃತ್ತಿಯಲ್ಲಿ ಅದೃಷ್ಟಪರೀಕ್ಷೆಗೆ ಇಳಿದಿದೆ. ನಾಯಕಸ್ಥಾನಕ್ಕೆ ವಿರಾಟ್ ಕೊಹ್ಲಿ ಜೊತೆಗೆ ರಜತ್ ಪಾಟೀದಾರ್ ಹೆಸರು ಮುಂಚೂಣಿಯಲ್ಲಿತ್ತು. ಕೊಹ್ಲಿ ಮತ್ತೆ ನಾಯಕನಾಗಲು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಪಾಟೀದಾರ್ಗೆ ಮಣೆ ಹಾಕಲಾಗಿದೆ.
2024ರಲ್ಲಿ ಪ್ಲೇಆಫ್ ಪ್ರವೇಶಿಸಿದ್ದ ಆರ್ಸಿಬಿ
2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಸಾಧ್ಯವಾದದ್ದನ್ನು ಸಾಧಿಸಿ ಪ್ಲೇಆಫ್ಗೆ ಪ್ರವೇಶಿಸಿತ್ತು. ಆರಂಭಿಕ 8 ಪಂದ್ಯಗಳಲ್ಲಿ ಗೆದ್ದಿದ್ದೇ 1 ಪಂದ್ಯ. ಒಟ್ಟು 7 ಪಂದ್ಯ ಸೋತಿತ್ತು. ಆದರೆ, ಎರಡನೇ ಹಂತದಲ್ಲಿ ಸತತ 6 ಪಂದ್ಯಗಳನ್ನು ಜಯಿಸಿ ನಾಲ್ಕನೇ ತಂಡವಾಗಿ ಪ್ಲೇಆಫ್ ಪ್ರವೇಶಿಸಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ಸೋತು ಹೊರಬಿದ್ದಿತ್ತು.
9 ಬಾರಿ ಪ್ಲೇಆಫ್, 3 ಫೈನಲ್
ಟ್ರೋಫಿ ಗೆಲ್ಲದಿದ್ದರೂ ಐಪಿಎಲ್ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಆರ್ಸಿಬಿ ನಾಲ್ಕನೇ ಸ್ಥಾನ ಪಡೆದಿರುವುದು ವಿಶೇಷ. 2009, 2011, 2016ರಲ್ಲಿ ಫೈನಲ್ ಪ್ರವೇಶಿಸಿದ್ದ ಆರ್ಸಿಬಿ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. 17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ 9 ಬಾರಿ ಪ್ಲೇಆಫ್ ಪ್ರವೇಶಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆರ್ಸಿಬಿ ಹಿಂದಿನ ಕ್ಯಾಪ್ಟನ್ಗಳು
ರಾಹುಲ್ ದ್ರಾವಿಡ್ – 2008-2008
ಕೆವಿನ್ ಪೀಟರ್ಸನ್ – 2009-2009
ಅನಿಲ್ ಕುಂಬ್ಳೆ – 2009-2010
ಡೇನಿಯಲ್ ವೆಟ್ಟೋರಿ – 2011-2012
ವಿರಾಟ್ ಕೊಹ್ಲಿ – 2011-2023
ಶೇನ್ ವ್ಯಾಟ್ಸನ್ – 2017-2017
ಫಾಫ್ ಡು ಪ್ಲೆಸಿಸ್ – 2022-2024