ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಮಾಡಿರುವ ಸ್ಟಂಪಿಂಗ್ ಕಂಡು ಇಡೀ ಕ್ರಿಕೆಟ್ ಲೋಕವೇ ಅಚ್ಚರಿ ಪಟ್ಟಿದೆ.
43 ವರ್ಷ ವಯಸ್ಸಾದರೂ ಧೋನಿ ಅವರ ವಿಕೆಟ್ ಕೀಪಿಂಗ್ ಕೌಶಲ್ಯ ಮಾತ್ರ ಮಂಕಾಗಿಲ್ಲ. ಇದಕ್ಕಾಗಿಯೇ ಇಂದಿಗೂ ಅವರ ಅಭಿಮಾನಿಗಳಿಗೆ ಧೋನಿ ಆಟ ಬೇಸರವಾಗಿಲ್ಲ. ವಯಸ್ಸಾದರೂ ಅವರ ಆಟ ಮಾತ್ರ ಪಕ್ವವಾಗುತ್ತಲೇ ಇದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು 0.12 ಸೆಕೆಂಡ್ ನಲ್ಲಿ ಸ್ಟಂಪ್ ಮಾಡಿದ್ದ ಧೋನಿ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧವೂ ಅದೇ ಸಾಮರ್ಥ್ಯ ತೋರಿದ್ದಾರೆ.
ಆರ್ ಸಿಬಿ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅವರನ್ನು ಧೋನಿ ಅದ್ಭುತ ರೀತಿಯಲ್ಲಿ ಸ್ಟಂಪ್ ಮಾಡಿದ್ದಾರೆ. 5ನೇ ಓವರ್‌ನ ಕೊನೆಯ ಎಸೆತದಲ್ಲಿ ಸಾಲ್ಟ್‌ರ ವಿಕೆಟ್ ಪತನವಾಯಿತು.