ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಐಪಿಎಲ್ ಫೈನಲ್ಸ್ ಗೆ ಲಗ್ಗೆ ಇಟ್ಟಿದೆ. ಜೂನ್ 3ರಂದು ಗುಜರಾತ್ ನ ಅಹಮದಾಬಾದ್ ನಲ್ಲಿ ಹೈವೋಲ್ಟೇಜ್ ಫೈನಲ್ ಪಂದ್ಯ ನಡೆಯಲಿದೆ.
18 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿಕೊಳ್ಳುವ ನಿಟ್ಟಿನಲ್ಲಿ ಆರ್ ಸಿಬಿ ತನ್ನ ಸರ್ವಸ್ವವನ್ನೂ ಪಣಕ್ಕಿಟ್ಟು ಸೆಣೆಸಲು ಅಣಿಯಾಗಿದೆ. ಇಂತಹ ಪಂದ್ಯವನ್ನು ಮಿಸ್ ಮಾಡಿಕೊಳ್ಳಲು ಅಭಿಮಾನಿಗಳಂತೂ ತಯಾರಿಲ್ಲ. ಹೀಗಾಗಿಯೇ ಅಹಮದಾಬಾದ್ ಪಂದ್ಯವನ್ನು ನೇರವಾಗಿ ಕಣ್ತುಂಬಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಇದರ ಫಲವೆನ್ನುವಂತೆ ನಿನ್ನೆ ರಾತ್ರಿಯೇ ಪಂದ್ಯದ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ.
ಅಷ್ಟೇ ಅಲ್ಲಾ ಟಿಕೆಟ್ ದರವೂ ಮೂಲ ಬೆಲೆಯ 5 ರಿಂದ 6 ಪಟ್ಟು ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿವೆ.. ಈಗಾಗಲೇ ಬ್ಲ್ಯಾಕ್ ನಲ್ಲಿ ಟಿಕೆಟ್ ಮಾರಾಟ ತಾರಕಕ್ಕೇರಿದ್ದು, ಭರ್ಜರಿ ಡಿಮ್ಯಾಂಡ್ ಕ್ರಿಯೇಟ್ ಮಾಡಿದೆ. ಸಾಲದ್ದಕ್ಕೆ ಅಹಮದಾಬಾದ್ ಪಂದ್ಯಕ್ಕೆ ರಾಜ್ಯದಿಂದ ತೆರಳೇ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಗಿದ್ದು, ವಿಮಾನ ದರವೂ ಏರಿಕೆಯಾಗಿದೆ.
ಅಹಮದಾಬಾದ್ ನಲ್ಲಿ ಹೋಟೆಲ್, ಲಾಡ್ಜ್ ಗಳಿಗೂ ಪುಲ್ ಬೇಡಿಕೆ ಸೃಷ್ಟಿಯಾಗಿದ್ದು, ಕೆಲ ಬಾರ್, ಪಬ್ ಗಳಲ್ಲಿ ಫೈನಲ್ ಪಂದ್ಯ ವೀಕ್ಷಣೆಗೆ ಬೃಹತ್ ಪರದೆಗಳನ್ನು ಅಳವಡಿಸಲಾಗುತ್ತಿದೆ. ಅತ್ಯಂತ ರಣರೋಚಕ ಕದನದ ಪ್ರತಿ ಕ್ಷಣವನ್ನು ಅವಿಸ್ಮರಣೀಯವಾಗಿಸುವ ಪ್ರತಿ ಅವಕಾಶವನ್ನೂ ಅಭಿಮಾನಿಗಳು, ಉದ್ಯಮ ಕ್ಷೇತ್ರ ಬಳಕೆ ಮಾಡಿಕೊಳ್ಳುತ್ತಿದೆ.