ಹೋದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅಕ್ಷತಾ ಕೂಡ ನಿನ್ನೆಯ ಕರಾಳ ದುರಂತದಲ್ಲಿ ಪ್ರಾಣತೆತ್ತಿದ್ದಾರೆ.
26 ವರ್ಷದ ಅಕ್ಷತಾ ಮೂಲತ ಸಿದ್ದಾಪುರದವರು. ಖಾಸಗಿ ಕಂಪನಿಯಲ್ಲಿ ಸಿಎ ಆಗಿದ್ದ ಅಕ್ಷತಾ ನಿನ್ನೆ ಸಾಫ್ಟ್ ವೇರ್ ಉದ್ಯೋಗಿಯಾಗಿರುವ ಪತಿ ಆಶಯ್ ಜೊತೆಯಲ್ಲೇ ಮೈದಾನಕ್ಕೆ ಬಂದಿದ್ದರು. ನೂಕುನುಗ್ಗಲಿನ ವೇಳೆ ಅಕ್ಷತಾ ಪ್ರಾಣತೆತ್ತಿದ್ದಾರೆ. ನಿನ್ನೆ ರಾತ್ರಿಯೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿಸಿ ಮೃತದೇಹವನ್ನು ಹಸ್ತಾಂತರಿಸಲಾಗಿದೆ. ಸಿದ್ದಾಪುರದಲ್ಲೇ ಅಕ್ಷತಾ ಅಂತ್ಯಸಂಸ್ಕಾರ ನಡೆಯಲಿದೆ.



















