ಹೊಟ್ಟೆ ಪಾಡಿಗೆ ಅಂತಾ ಮಂಡ್ಯ ಬಿಟ್ಟು ಮೈಸೂರಿಗೆ ಹೋಗಿದ್ದ ಪೂರ್ಣಚಂದ್ರ ನಿನ್ನೆಯ ಕಾಲ್ತುಳಿತದಲ್ಲಿ ಪ್ರಾಣತೆತ್ತಿದ್ದಾರೆ.
ಮೈಸೂರಿನ ಬಿಲ್ಡರ್ ಸಂಸ್ಥೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೂರ್ಣಚಂದ್ರ ಮಂಡ್ಯದಲ್ಲಿರುವ ತನ್ನ ಕುಟುಂಬಕ್ಕೆ ಆಧಾರವಾಗಿದ್ದ. ಆದರೆ, ನಿನ್ನೆ ತನ್ನ ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಳ್ಳಲೆಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದ.
ಆದರೆ, ನಡೆಯಬಾರದಂತ ದುರಂತ ನಡೆದು ಹೋಗಿದೆ. ತನ್ನ ಕುಟುಂಬಕ್ಕೆ ಜೀವನಾಧಾರವಾಗಿದ್ದ ಪೂರ್ಣಚಂದ್ರ ಇದೀಗ ಬಾರದೂರಿಗೆ ಪಯಣಿಸಿದ್ದಾನೆ. ಇತ್ತ ಮಗನ ಕಳೆದದುಕೊಂಡ ಕುಟುಂಬಸ್ತರು ಕಣ್ಣೀರಿಡುತ್ತಿದ್ದಾರೆ. ನಿನ್ನೆ ರಾತ್ರಿಯೇ ಮರಣೋತ್ತರ ಪರೀಕ್ಷೆ ಮುಗಿಸಿ ಮೃತದೇಹವನ್ನು ಮಂಡ್ಯದ ರಾಮಸಮುದ್ರಕ್ಕೆ ಸ್ಥಳಾಂತರಿಸಲಾಗಿದೆ.


















