ಬೆಂಗಳೂರು: ನೀವು ಎಕನಾಮಿಕ್ಸ್, ಕಾನೂನು, ಸ್ಟ್ಯಾಟಿಸ್ಟಿಕ್ಸ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದೀರಾ? ಹಾಗಾದರೆ, ನಿಮಗೊಂದು ಸುವರ್ಣಾವಕಾಶದ ಬಾಗಿಲು ತೆರೆದಿದೆ. ಹೌದು, ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ (RBI Summer Internship 2026) ಮೂರು ತಿಂಗಳ ಇಂಟರ್ನ್ ಶಿಪ್ ಕೈಗೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ದೇಶದ ಹಣಕಾಸು ವ್ಯವಸ್ಥೆ, ನೀತಿ-ನಿರೂಪಣೆಗಳು, ಆರ್ ಬಿಐ ಕಾರ್ಯವೈಖರಿ ಸೇರಿ ಹಲವು ವಿಷಯಗಳನ್ನು ತಿಳಿಯಲು, ಪ್ರಾಯೋಗಿಕವಾಗಿ ಅಧ್ಯಯನ ಮಾಡಲು ಆರ್ ಬಿಐ ಇಂಟರ್ನ್ ಶಿಪ್ ಸಹಕಾರಿಯಾಗಲಿದೆ. ಹಾಗಾಗಿ, ಈಗಾಗಲೇ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಆರ್ ಬಿಐನಲ್ಲಿ ಇಂಟರ್ನ್ ಶಿಪ್ ಮಾಡುವ ಮೂಲಕ ವೃತ್ತಿಜೀವನದ ಆರಂಭಕ್ಕೆ ಭದ್ರ ಬುನಾದಿ ಹಾಕಿಕೊಳ್ಳಬಹುದಾಗಿದೆ.
ನೇಮಕಾತಿ ಸಂಸ್ಥೆ: ಆರ್ ಬಿಐ
ಹುದ್ದೆಗಳ ಹೆಸರು: ಇಂಟರ್ನ್ ಶಿಪ್
ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್
ತರಬೇತಿ ಅವಧಿ: 3 ತಿಂಗಳು
ಉದ್ಯೋಗ ಸ್ಥಳ: ದೇಶಾದ್ಯಂತ ಇರುವ ಆರ್ ಬಿಐ ಕಚೇರಿಗಳು
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಡಿಸೆಂಬರ್ 15
2026ರ ಏಪ್ರಿಲ್ ನಿಂದ ಜೂನ್ ವರೆಗೆ ಮೂರು ತಿಂಗಳು ಇಂಟರ್ನ್ ಶಿಪ್ ಮಾಡಬಹುದಾಗಿದೆ. ತರಬೇತಿ ಅವಧಿಯಲ್ಲಿಯೇ ಅಭ್ಯರ್ಥಿಗಳಿಗೆ ಮಾಸಿಕ 20 ಸಾವಿರ ರೂಪಾಯಿ ಸ್ಟೈಪೆಂಡ್ ನೀಡಲಾಗುತ್ತದೆ. ಬೆಂಗಳೂರು ಸೇರಿ ಹಲವು ಕಚೇರಿಗಳಲ್ಲಿ ಸುಮಾರು 125 ಅಭ್ಯರ್ಥಿಗಳು ಇಂಟರ್ನ್ ಶಿಪ್ ಮಾಡಲು ಅವಕಾಶ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬಯಸುವವರು http://opportunities.rbi.org.in/scripts/ApplicationForm.aspx ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ. ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಪರಿಶೀಲನೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಇದನ್ನೂ ಓದಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 33 ಹುದ್ದೆ | 1.10 ಲಕ್ಷ ರೂ. ಸಂಬಳ



















