ರವಿಕುಮಾರ್ ವರಿಗೆ ಇಂದೊಂದು ಕೆಟ್ಟ ಚಾಳಿ ಬಂದುಬಿಟ್ಟಿದೆ. ಇಂಥವರು ನಿಜಕ್ಕೂ ರಾಜಕಾರಣದಲ್ಲಿ ಇರಬಾರದು ಎಂದು ಬೀದರ್ ನಲ್ಲಿ ಸಚಿವ ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ.
ನಮ್ಮದು ಸುಸಂಸ್ಕೃತ ಪಕ್ಷ ಅಂತಾ ಹೇಳಿಕೊಳ್ಳುವ ಬಿಜೆಪಿ ನಾಯಕರು, ಮಹಿಳೆಯರ ಬಗ್ಗೆ ತಾತ್ಸಾರ, ಅವಾಚ್ಯ ಪದಗಳ ಬಳಕೆ, ಮಾನಸಿಕ ಹಿಂಸೆ ನೀಡುವುದನ್ನೇ ಅಭ್ಯಾಸವಾಗಿಸಿಕೊಂಡಿದ್ದಾರೆ.
ಈ ಹಿದೆ ಕಲಬುರಗಿ ಜಿಲ್ಲಾಧಿಕಾರಿ ವಿರುದ್ಧವೂ ರವಿಕುಮಾರ್ ನಾಲಗೆ ಹರಿಬಿಟ್ಟಿದ್ದರು. ನಿಜಕ್ಕೂ ರವಿಕುಮಾರ್ ಅವರಿಗೆ ಪರಿಷತ್ ಸದಸ್ಯರಾಗಿ ಮುಂದುವರಿಯುವ ನೈತಿಕತೆ ಮತ್ತು ಜವಾಬ್ದಾರಿ ಎರಡೂ ಇಲ್ಲಾ ಎಂದು ಖಂಡ್ರೆ ಗರಂ ಆಗಿದ್ದಾರೆ. ಕೀಳು ಮಾತುಗಳನ್ನಾಡಿರುವ ರವಿಕುಮಾರ್ ವಿರುದ್ಧ ಕಠಿಣ ಕಾನೂನು ಕ್ರಮ ಆಗಬೇಕು ಅಂತಲೂ ಖಂಡ್ರೆ ಆಗ್ರಹಿಸಿದ್ದಾರೆ.