ಉಡುಪಿ: ತವರಿಗೆ ಆಗಮಿಸಿದ ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ನಾಗ ದೇವರ ಪೂಜೆ ನಡೆಸಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರು ಬಳಿಯ ಎರ್ಲಪಾಡಿ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಾಗಪೂಜೆ ನಡೆಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ ಮೂಲ ಊರಿಗೆ ಆಗಮಿಸಿ ನಾಗದೇವರಿಗೆ ಪೂಜೆ ಸಲ್ಲಿಸಿದ್ದಾರೆ. ರವಿ ಶಾಸ್ತ್ರಿ ಹಿರಿಯರು ಕರ್ವಾಲು ಮೂಲದವರು. ರವಿ ಶಾಸ್ತ್ರಿ ಅವರು 2017ರಿಂದ ಸತತ 13 ಬಾರಿ ನಾಗ ದರ್ಶನಕ್ಕೆ ಬಂದಿದ್ದಾರೆ.
50 ವರ್ಷಗಳ ಹಿಂದೆ ರವಿ ಶಾಸ್ತ್ರಿ ಹಿರಿಯರು ಎರ್ಲಪಾಡಿ ತೊರೆದಿದ್ದರು. ಸಂತಾನ ಇಲ್ಲದೆ ಕೊರಗಿದ್ದ ರವಿಶಾಸ್ತ್ರಿ ದಂಪತಿಗಳು ದಶಕಗಳ ಹಿಂದೆ ಎರ್ಲಪಾಡಿಗೆ ಭೇಟಿ ನೀಡಿದ್ದರು. ನಾಗದೇವರ ಸೇವೆ ಮಾಡಿದ ನಂತರ ರವಿ ಶಾಸ್ತ್ರಿ ಹೆಣ್ಣು ಮಗುವಿನ ತಂದೆಯಾದರು. ಆನಂತರ ನಿರಂತರವಾಗಿ ಎರ್ಲಪಾಡಿಗೆ ಭೇಟಿ ನೀಡುತ್ತಿದ್ದಾರೆ. ಈಗ ನಾಗದೇವರ ದರ್ಶನ ಮಾಡಿದ ರವಿ ಶಾಸ್ತ್ರಿ, ಮೂಲ ನಾಗದೇವರಿಗೆ ಪಂಚಾಮೃತ ಅಭಿಷೇಕ, ಎಳನೀರಿನ ಅಭಿಷೇಕ, ಕಲ್ಪೋಕ್ತ ಪೂಜೆ, ನಾಗತಂಬಿಲ ಸೇವೆ ನೆರವೇರಿಸಿದರು.