ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿಚಾರವಾಗಿ ಹಲವಾರು ಗಾಸಿಪ್ ಗಳು ಇವೆ. ಈ ಮದ್ಯೆ ನಟಿಯು ವಿಜಯ್ ಅವರ ಕುಟುಂಬಸ್ಥರೊಂದಿಗೆ ಸಿನಿಮಾ ವೀಕ್ಷಿಸಿದ್ದಾರೆ.
ರಶ್ಮಿಕಾ ಹಾಗೂ ವಿಜಯ್ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದು, ಕದ್ದು ಮುಚ್ಚಿ ವಿದೇಶದಲ್ಲಿ ಓಡಾಡುತ್ತಿದ್ದಾರೆ ಎಂಬುವುದು ಗುಟ್ಟಾಗಿ ಉಳಿದಿಲ್ಲ. ಇತೀಚೆಗೆ ರಶ್ಮಿಕಾ ಮಂದಣ್ಣ ಅವರು ಹೆಚ್ಚು ಸಮಯವನ್ನು ವಿಜಯ್ ದೇವರಕೊಂಡ ಕುಟುಂಬದ ಜೊತೆ ಕಳೆಯುತ್ತಾರೆ. ಈಗ ರಶ್ಮಿಕಾ ಅವರು ವಿಜಯ್ ದೇವರಕೊಂಡ ಕುಟುಂಬಕ್ಕೆ ‘ಪುಷ್ಪ 2’ ವೀಕ್ಷಿಸಿದ್ದಾರೆ.
ಡಿ. 5ಕ್ಕೆ ‘ಪುಷ್ಪ 2’ ಸಿನಿಮಾ ಬಿಡುಗಡೆಯಾಗಿದೆ. ಈ ಚಿತ್ರ ಅಭಿಮಾನಿಗಳಿಂದ ಭರ್ಜರಿ ಮೆಚ್ಚುಗೆ ಪಡೆಯುತ್ತಿದೆ. ಅಲ್ಲು ಅರ್ಜುನ್ಗೆ ಜೊತೆಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈಗ ಇದೇ ಚಿತ್ರವನ್ನು ತಮ್ಮ ಬಾಯ್ ಫ್ರೆಂಡ್ ಕುಟುಂಬಸ್ಥರಿಗೆ ತೋರಿಸಿದ್ದಾರೆ.
ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ ಹಾಗೂ ವಿಜಯ್ ಸಹೋದರ ಆನಂದ್ ಅವರು ರಶ್ಮಿಕಾ ಜೊತೆ ಕಾಣಿಸಿಕೊಂಡಿದ್ದಾರೆ. ಆದರೆ, ವಿಜಯ್ ದೇವರಕೊಂಡ ಮಾತ್ರ ಅವರೊಂದಿಗೆ ಇಲ್ಲ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮದುವೆ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ರಶ್ಮಿಕಾ ಹೆಚ್ಚಾಗಿ ಅವರ ಕುಟುಂಬಸ್ಥರೊಂದಿಗೆ ಆಪ್ತರಾಗಿದ್ದಾರೆ.