ಉದಯಪುರದಲ್ಲಿ ಅದ್ದೂರಿ ವಿವಾಹ ಸಮಾರಂಭದ ನಂತರ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿ ಥೈಲ್ಯಾಂಡ್‌ಗೆ ಹಾರಿದ್ದು, ಹನಿಮೂನ್ ಮೂಡ್‌ನಲ್ಲಿದೆ. ಈಗ, ನವವಿವಾಹಿತರು ಪರಸ್ಪರರ ಅಪ್ಪಿಕೊಂಡು ಒಟ್ಟಿಗೆ ಪೋಸ್ ನೀಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಥೈಲ್ಯಾಂಡ್‌ನ ಕೋಹ್ ಸಮುಯಿಯ ಖಾಸಗಿ ವಿಲ್ಲಾದಲ್ಲಿ ಈ ಜೋಡಿ ಉಳಿದುಕೊಂಡಿದ್ದು, ಇವರ ಸಿಂಪಲ್ ಹಾಗೂ ರೊಮ್ಯಾಂಟಿಕ್ ಲುಕ್ ಫ್ಯಾನ್ಸ್‌ಗೆ ಸಖತ್ ಇಷ್ಟವಾಗಿದೆ.
ಈ ಜೋಡಿ ಯಾವುದೇ ಐಷಾರಾಮಿ ಹೋಟೆಲ್ ಬದಲಿಗೆ ಖಾಸಗಿತನಕ್ಕೆ ಹೆಚ್ಚು ಒತ್ತು ನೀಡಿ ಸಿಂಪಲ್ ಆಗಿ ಕಾಲ ಕಳೆದಿದ್ದಾರೆ. ವೈರಲ್ ಆಗಿರುವ ಫೋಟೋದಲ್ಲಿ ಇಬ್ಬರೂ ಕೂಲ್ ಮತ್ತು ರಿಲ್ಯಾಕ್ಸ್ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಫೆಬ್ರವರಿ 26, 2026ರಂದು ಉದಯಪುರದ ITC ಮೆಮೆಂಟೋಸ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಮದುವೆಗೆ ಕೇವಲ ಆಪ್ತರು ಮಾತ್ರ ಸಾಕ್ಷಿಯಾಗಿದ್ದರು. ಆಂಧ್ರ ಮತ್ತು ಕೊಡವ ಸಂಪ್ರದಾಯಗಳ ಪ್ರಕಾರ ಮದುವೆ ನಡೆದಿತ್ತು. ನಂತರ ಮಾರ್ಚ್ 4, ಹೈದರಾಬಾದ್‌ನಲ್ಲಿ ಅದ್ದೂರಿ ರಿಸೆಪ್ಷನ್ ಕೂಡ ನಡೆದಿತ್ತು. ಅಕ್ಟೋಬರ್ 2025ರಲ್ಲಿ ಇವರ ನಿಶ್ಚಿತಾರ್ಥ ನಡೆದಿತ್ತು. ಈ ಜೋಡಿ ಮುಂದೆ ‘ರಣಬಲಿ’ ಚಿತ್ರದಲ್ಲಿ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದು, ಈ ಸಿನಿಮಾ ಸೆಪ್ಟೆಂಬರ್ 11, 2026ರಂದು ತೆರೆಗೆ ಬರಲಿದೆ.
ಇದನ್ನೂ ಓದಿ : ರಂಜಾನ್ ಸಂಭ್ರಮ.. ಕೆಜಿಎಫ್ ಬಾಬು ನಿವಾಸಕ್ಕೆ ಆಂಧ್ರ ರಾಜ್ಯಪಾಲ ಅಬ್ದುಲ್ ನಜೀರ್ ಭೇಟಿ!



















