ಬೆಂಗಳೂರು: ರ್ಯಾಪಿಡೋ ಚಾಲಕನೋರ್ವ ಭಾಷೆಯನ್ನೇ ಮಾನದಂಡವಾಗಿಟ್ಟುಕೊಂಡು ಪ್ರಯಾಣಿಕರೊಬ್ಬರಿಗೆ ಮೋಸ ಮಾಡಿರುವ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ರ್ಯಾಪಿಡೋ ಚಾಲಕನ ವಿರುದ್ಧ ಯುವತಿ ಗಂಭೀರ ಆರೋಪ ಮಾಡಿದ್ದಾರೆ. 296 ರೂ. ಆಗಿದ್ದ ಆಟೋ ರೈಡ್ ಗೆ 390 ರೂ. ಕೊಡುವಂತೆ ಚಾಲಕ ಕೇಳಿ ಭಾಷೆ ಬಾರದ ಯುವತಿಗೆ ಮೋಸ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಯುವತಿ, ರ್ಯಾಪಿಡೋ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಅಲ್ಲದೇ, ಪೊಲೀಸ್ ಠಾಣೆಗೂ ದೂರು ನೀಡಿದ್ದಾರೆ.
ಹೆಚ್ಚುವರಿ ಹಣ ಕೊಡಲು ಒಪ್ಪದಿದ್ದಕ್ಕೆ ಚಾಲಕ ವಾಗ್ವಾದ ನಡೆಸಿದ್ದಾನೆ ಎನ್ನಲಾಗಿದೆ. ಔಟ್ ಸೈಡರ್ಸ್, ಭಾಷೆ ಬಾರದವರೇ ಈತನ ಟಾರ್ಗೆಟ್ ಎನ್ನಲಾಗಿದ್ದು, ಚಾಲಕನ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.