‘ಕಾಮಿಡಿ ಕಿಲಾಡಿಗಳು’ ಶೋ ಖ್ಯಾತಿಯ ಮಡೆನೂರು ಮನು (Madenuru Manu) ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ.
ಕಿರುತೆರೆ ನಟಿಯೊಬ್ಬರು ಅತ್ಯಾಚಾರದ ಆರೋಪ ಮಾಡಿದ್ದಾರೆ. ಈ ಕುರಿತು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಡೆನೂರು ಮನು ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದಲ್ಲಿ ನಟಿಸಿದ್ದರು. ಇದು ಬಿಡುಗಡೆಯ ಹಂತಕ್ಕೆ ಬಂದಿತ್ತು. ಆದರೆ, ಅದಕ್ಕೂ ಮುನ್ನ ಅವರ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿದೆ.
ಚಿತ್ರರಂಗದಲ್ಲಿ ಕೆಲಸ ಮಾಡುವಾಗ ಮಡೆನೂರು ಮನು ಜೊತೆ ಪರಿಚಯವಾಗಿತ್ತು. ಈಗ ‘ನನ್ನ ಮೇಲೆ ಮನು ಅತ್ಯಾಚಾರ ಮಾಡಿದ್ದಾನೆ’ ಎಂದು ನಟಿ ದೂರು ನೀಡಿದ್ದಾರೆ. ಸದ್ಯ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಮನುಗಾಗಿ ಹುಡುಕಾಟ ನಡೆಸಿದ್ದಾರೆ.