ಕೊಡಗು: ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದ್ದು, ಇಡೀ ರಾಜ್ಯವೇ ಶಾಪ ಹಾಕುತ್ತಿದೆ.
ಡ್ರಾಪ್ ಕೇಳಿದ ಬಾಲಕಿ ಮೇಲೆ ಯುವಕರು ಅತ್ಯಾಚಾರ (sexual assult) ನಡೆಸಿರುವ ಘಟನೆ ನಡೆದಿದೆ. ಈ ಘಟನೆ ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಹತ್ತಿರದ ಕಾಫಿ ತೋಟದಲ್ಲಿ ನಡೆದಿದೆ. ಜೂನ್ 9ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ನಡೆಯುತ್ತಿದ್ದಂತೆ ಪಾಪಿಗಳು ಅದೇ ರೀತಿ ಮತ್ತೋರ್ವ ಬಾಲಕಿ ಮೇಲೂ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ. ಸಂತ್ರಸ್ತ ಬಾಲಕಿಯರಿಂದ ಕುಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನಾಸ್ಥಳಕ್ಕೆ ಕೊಡಗು ಎಸ್ಪಿ ರಾಮರಾಜನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಜೂನ್ 9 ರಂದು ಮೂವರು ಸ್ನೇತರ ಜೊತೆ ರಸ್ತೆಯಲ್ಲಿ ಬಾಲಕಿಯರು ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ದಾರಿಯಲ್ಲಿ ಬಂದ ಅಪರಿಚಿತರ ಕಾರನ್ನು ಐವರು ಹತ್ತಿದ್ದಾರೆ. ನಾಗರಹೊಳೆಗೆ ಡ್ರಾಪ್ ನೀಡುವಂತೆ ಬಾಲಕಿಯರಿಂದ ವಿನಂತಿ ಮಾಡಲಾಗಿದೆ.
ಮಾರುತಿ 800 ಕಾರಿನಲ್ಲಿ ನಾಗರಹೊಳೆ ಕಡೆ ಬಾಲಕಿಯರು ತೆರಳಿದ್ದು, ದಾರಿ ಮಧ್ಯೆ ಕಾಫಿ ತೋಟದಲ್ಲಿ ಓರ್ವ ಬಾಲಕಿ ಮೇಲೆ ನವೀಂದ್ರ, ಅಕ್ಷಯ್ ಎಂಬುವವರು ಅತ್ಯಾಚಾರ ನಡೆಸಿದ್ದಾರೆ. ಮತ್ತೋರ್ವ ಬಾಲಕಿ ಮೇಲೆ ರಾಹುಲ್, ಮನು, ಸಂದೀಪ್ ಎಂಬುವವರಿಂದ ಅತ್ಯಾಚಾರಕ್ಕೆ ಯತ್ನಿಸಿಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.