ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ (Gold Smuggling Case) ಜೈಲುಪಾಲಾಗಿರುವ ನಟಿ ರನ್ಯಾ (Ranya Rao) ಬೇಲ್ ಭವಿಷ್ಯ ಮಾ. 14ಕ್ಕೆ ಕಾಯ್ದಿರಿಸಲಾಗಿದೆ.
ಬೇಲ್ ಆದೇಶವನ್ನು ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ಮಾ.14ಕ್ಕೆ ಕಾಯ್ದಿರಿಸಿದೆ. ರನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಣಕ್ಕೊಂದು ಮಾಹಿತಿಗಳು ಹೊರ ಬೀಳುತ್ತಿವೆ. ಹಿಂದಿನ ವರ್ಷ ದುಬೈನಲ್ಲಿ ಎರಡು ಬಾರಿ ಚಿನ್ನ ಖರೀದಿಸಿದ್ದ ರನ್ಯಾ, ಸ್ವಿಟ್ಜರ್ ಲ್ಯಾಂಡ್ ಗೆ ಒಯ್ಯುವುದಾಗಿ ಅಲ್ಲಿನ ಕಸ್ಟಮ್ಸ್ ಅಧಿಕಾರಿಗಳನ್ನು ಯಾಮಾರಿಸಿದ್ದರು. ಜಿನೇವಾಗಿ ಹೋಗುವುದಾಗಿ ಹೇಳಿ, ಭಾರತಕ್ಕೆ ಬಂದಿದ್ದರು. ಆನಂತರ ಟ್ರಾವೆಲ್ ಹಿಸ್ಟರಿ ಪರೀಕ್ಷಿಸಿದಾಗ ಎಲ್ಲ ಅಂಶಗಳು ಬೆಳಕಿಗೆ ಬಂದಿದ್ದವು. ಸ್ಮಗ್ಲಿಂಗ್ ಕಿಂಗ್ ಪಿನ್ ಆಗಿರುವ ರನ್ಯಾ 6 ತಿಂಗಳು ದೇಶದಿಂದ ಹೊರಗೆ ಇರುತ್ತಿದ್ದರು. ಈಗ ಜಾಮೀನು ಅರ್ಜಿ ವಿಚಾರಣೆ ವೇಳೆ ಈ ಎಲ್ಲ ಅಂಶಗಳು ಪ್ರಸ್ತಾಪವಾಗಿವೆ.
ರನ್ಯಾರಾವ್ ಪರ ವಕೀಲರು, ರನ್ಯಾರಾವ್ ಸರ್ಚ್ ಪ್ರಕ್ರಿಯೆ ಕಾನೂನು ಪ್ರಕಾರ ನಡೆದಿಲ್ಲ. ನಿದ್ದೆ ಮಾಡಲೂ ಬಿಡದೆ ವಿಚಾರಣೆ ನಡೆಸಿದ್ದಾರೆ ಎಂದು ವಾದಿಸಿದ್ದಾರೆ. ರನ್ಯಾ ಮದುವೆಯಾದ ಮಹಿಳೆ. ಅವರೆಲ್ಲೂ ಹೋಗಲ್ಲ. ಜಾಮೀನು ನೀಡಿ ಎಂದು ಮನವಿ ಮಾಡಿದರು. ವಾದ- ಪ್ರತಿವಾದ ಆಲಿಸಿದ ನ್ಯಾಯಾಲಯ ಮಾರ್ಚ್ 14ಕ್ಕೆ ಆದೇಶ ಕಾಯ್ದಿರಿಸಿತು.