ಬೆಂಗಳೂರು: ನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ವಿಚಾರಣೆ ಎದುರಿಸುವ ಅಥವಾ ಬಂಧನಕ್ಕೊಳಗಾಗುವ ಆತಂಕಕ್ಕೆ ಒಳಗಾಗಿದ್ದ ಅವರ ಪತಿ ಜತಿನ್ ಹುಕ್ಕೇರಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಜತಿನ್ ಹುಕ್ಕೇರಿ ತನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ತನ್ನನ್ನು ಈ ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ಆರೋಪಿಯನ್ನಾಗಿಸಿ ವಿಚಾರಣೆ ಅಥವಾ ಬಂಧನಕ್ಕೆ ಒಳಪಡಿಸಬಾರದು ಎಂದು ಕೋರ್ಟ್ ಮೊರೆ ಹೋಗಿದ್ದರು.
ಜನತಿನ್ ಹುಕ್ಕೇರಿ ಅವರ ಅರ್ಜಿ ಪರಿಶೀಲನೆ ನಡೆಸಿದ ಕೋರ್ಟ್ ಪ್ರಕರಣಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ತೀರ್ಪು ನೀಡಿದ್ದು, ಕೋರ್ಟ್ ಆದೇಶದಿಂದ ಜತಿನ್ ಹುಕ್ಕೇರಿ ಬಜಾವ್ ಆಗಿದ್ದಾರೆ.