ಬೆಂಗಳೂರು: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
ಈ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಆರ್ ಐ ಅಧಿಕಾರಿಗಳು ಮೂರನೇ ಆರೋಪಿಯನ್ನು ಬಂಧಿಸಿದ್ದಾರೆ. ಸಾಹಿಲ್ ಜೈನ್ ನ ಬಂಧಿತ ಆರೋಪಿ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಆರ್ ಐ ಅಧಿಕಾರಿಗಳು ರನ್ಯಾ ರಾವ್, ತರುಣ್ ಬಂಧಿಸಿದ್ದಾರೆ. ಬುಧವಾರ ಪ್ರಕರಣದ ಮೂರನೇ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನ ಬಂಧಿಸಿರುವ ಅಧಿಕಾರಿಗಳು ನಾಲ್ಕು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ಮಾರ್ಚ್ 29 ರವರೆಗೂ ಸಾಹಿಲ್ ಜೈನ್ ನ್ನು ಡಿಆರ್ ಐ ಅಧಿಕಾರಿಗಳು ವಿಚಾರಣೆಗೊಳಪಡಿಸಲಿದ್ದಾರೆ.
ಸಾಹಿಲ್ ಜೈನ್ ಬಳ್ಳಾರಿ ಮೂಲದವನು ಎನ್ನಲಾಗಿದೆ. ಈತ ಜ್ಯುವೆಲ್ಲರಿ ಶಾಪ್ ನಡೆಸುತ್ತಿದ್ದಾನೆ. ಬೆಂಗಳೂರಿನಲ್ಲೂ ಜುವೆಲ್ಲರಿ ಶಾಪ್ ಬ್ರಾಂಚ್ ಹೊಂದಿದ್ದಾನೆ. ರನ್ಯಾರಾವ್ ಮತ್ತು ತರುಣ್ ರಾಜ್ ಜತೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಅಕ್ರಮವಾಗಿ ತರುತ್ತಿದ್ದ ಚಿನ್ನಾಭರಣ ಹಾಗೂ ಚಿನ್ನದ ಪೀಸ್ ಗಳನ್ನು ಈತ ಖರೀದಿಸುತ್ತಿದ್ದ ಎನ್ನಲಾಗಿದೆ ಅವುಗಳನ್ನು ಕರಗಿಸಿ ಬಂದ ಹಣವನ್ನು ಕೊಡುತ್ತಿದ್ದ. ಈತನಿಗೆ ಶೇ. 10 ರಿಂದ 15 ಕಮಿಷನ್ ನೀಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.