ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿ ರನ್ಯಾ ರಾವ್(Ranya Rao Gold Smuggling Case) ಅರೆಸ್ಟ್ ಆಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಿಐಡಿ(CID Investigation) ತನಿಖೆಗೆ ಆದೇಶ ನೀಡಿತ್ತು. ಆದರೆ, ಈಗ ಆದೇಶ ಹಿಂಪಡೆಯುವುದರ ಮೂಲಕ ಹಲವು ಅನುಮಾನಗಳಿಗೆ ದಾರಿ ಮಾಡಿ ಕೊಟ್ಟಿದೆ.
ಶಿಷ್ಟಾಚಾರ ಉಲ್ಲಂಘಟನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಗೆ ಸರ್ಕಾರ ಆದೇಶ ನೀಡಿತ್ತು. ಮೊನ್ನೆ ರಾತ್ರಿ ಆದೇಶ ನೀಡಿ, ನಿನ್ನೆ ರಾತ್ರಿಯೇ ಆದೇಶ ಹಿಂಪಡೆದಿದೆ. ಸರ್ಕಾರದ ಈ ನಡೆ ಹಲವಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಸಿಐಡಿ ತನಿಖೆ ಆದೇಶ ಬೆನ್ನಲ್ಲೇ ಐಓ ಆಗಿ ರಾಘವೇಂದ್ರ ಹೆಗ್ಡೆ ಅವರ ನೇಮಕ ಆಗಿತ್ತು. ಈಗ ಆದೇಶ ಹಿಂಪಡೆಯಲಾಗಿದ್ದು, ಸಿಐಡಿ ಡಿಜಿಪಿ ತನಿಖಾಧಿಕಾರಿಯನ್ನು ನೇಮಕ ಮಾಡಿ ಹಿಂಪಡೆದಿರುವ ಹಿಂದಿನ ಉದ್ಧೇಶ ಏನು? ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಸಿಐಡಿ ತನಿಖೆಯ ಆದೇಶ ಹಿಂಪಡೆದ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ ಗೌರವ್ ಗುಪ್ತಾ ತನಿಖೆಯಷ್ಟೇ ನಡೆಯಲಿದೆ. ಅದು ಪ್ರೋಟೋಕಾಲ್ ಉಲ್ಲಂಘನೆಗೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ರಾಮಚಂದ್ರರಾವ್ ವಿರುದ್ಧದ ಆರೋಪದ ಬಗ್ಗೆ ತನಿಖೆ ಮಾತ್ರ ನಡೆಯಲಿದೆ ಎಂಬ ಮಾಹಿತಿ ಕರ್ನಾಟಕ ನ್ಯೂಸ್ ಬೀಟ್ ಗೆ ಲಭ್ಯವಾಗಿದೆ.