ಬೆಂಗಳೂರು | ರಂಜಾನ್ ಹಬ್ಬದ ಸಂಭ್ರಮದ ನಡುವೆ ಇಂದು ಆಂಧ್ರಪ್ರದೇಶದ ರಾಜ್ಯಪಾಲರಾದ ಎಸ್. ಅಬ್ದುಲ್ ನಜೀರ್ ಅವರು ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದ ನಾಯಕ ಕೆಜಿಎಫ್ ಬಾಬು ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಹಬ್ಬದ ಉತ್ಸಾಹದಲ್ಲಿ ನಡೆದ ಈ ಭೇಟಿ ಎಲ್ಲರ ಗಮನಸೆಳೆಯಿತು.
ರಂಜಾನ್ ಹಬ್ಬದ ಪ್ರಯುಕ್ತ ಕೆಜಿಎಫ್ ಬಾಬು ಕುಟುಂಬಕ್ಕೆ ಶುಭಾಶಯ ತಿಳಿಸಲು ಗವರ್ನರ್ ಸ್ವತಃ ಮನೆಗೆ ಭೇಟಿ ನೀಡಿದ್ದು, ಆತ್ಮೀಯ ವಾತಾವರಣದಲ್ಲಿ ಮಾತುಕತೆ ನಡೆದಿದೆ. ಸ್ಥಳೀಯರು ಮತ್ತು ಬೆಂಬಲಿಗರು ಕೂಡ ಈ ಸಂದರ್ಭಕ್ಕೆ ಸಾಕ್ಷಿಯಾಗಿದ್ದಾರೆ.
ಕನ್ನಡಿಗರಾದ ಎಸ್. ಅಬ್ದುಲ್ ನಜೀರ್ ಅವರು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಆಂಧ್ರಪ್ರದೇಶದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್‌ನಲ್ಲಿ ಬೈ ಎಲೆಕ್ಷನ್ ಟಿಕೆಟ್ ಯಾರಿಗೆ? ಇಂದೇ ಘೋಷಣೆ ಸಾಧ್ಯತೆ!


















