ಮಾಜಿ ಸಿಎಂ ಎಸ್.ಎಂ. ಕೃಷ್ಣ ನಿದನರಾಗಿದ್ದು, ಅವರ ಬಗ್ಗೆ ನಟಿ ರಮ್ಯಾ ಭಾವುಕ ಪೋಸ್ಟ್ ಮಾಡಿದ್ದಾರೆ.
ನಟಿ ರಮ್ಯಾ ಅವರು ರಾಜಕೀಯವಾಗಿ ಬೆಳೆಯಲು ಎಸ್.ಎಂ. ಕೃಷ್ಣ ಅವರ ಸಹಕಾರ ದೊಡ್ಡದಿದೆ. ಕೃಷ್ಣ ಅವರ ಮಾರ್ಗದರ್ಶನದಲ್ಲೇ ನಟಿ ರಮ್ಯಾ ರಾಜಕೀಯ ರಂಗ ಪ್ರವೇಶಿಸಿದ್ದರು. ಸದ್ಯ ಅವರ ಅಗಲಿಕೆಯಿಂದಾಗಿ ನೊಂದಿರುವ ರಮ್ಯಾ ಭುವುಕವಾಗಿ ಪೋಸ್ಟ್ ಮಾಡಿ ಕಂಬನಿ ಮಿಡಿದಿದ್ದಾರೆ.
ಮಂಗಳವಾರ ಅವರ ನಿವಾಸಕ್ಕೆ ಆಗಮಿಸಿದ್ದ ನಟಿ ರಮ್ಯಾ, ಕಣ್ಣೀರು ಹಾಕಿದ್ದರು. ರಮ್ಯಾ ಪೋಸ್ಟ್ ನಲ್ಲಿ ಎಲ್ಲ ರೀತಿಯಿಂದಲೂ ಒಬ್ಬ ಅದ್ಭುತ ರಾಜನೀತಿಜ್ಞ ಆಗಿದ್ದರು. ಎಂದಿಗೂ ಅವರ ‘ರಾಜಕಾರಣಿ’ ರೀತಿ ವರ್ತಿಸಿದವರಲ್ಲ.
ಎಂದಿಗೂ ಸಹ ಯಾರ ಬಗ್ಗೆಯೂ ಕೀಳಾಗಿ ಅವರು ಮಾತನಾಡಿದ್ದಿಲ್ಲ, ಅವರ ಎದುರಾಳಿಗಳಿಗೂ ಅದೇ ಗೌರವವನ್ನು ಅವರು ನೀಡುತ್ತಿದ್ದರು. ದೂರದೃಷ್ಟಿಯುಳ್ಳ, ಮಾನವೀಯತೆ ಹೊಂದಿದ್ದ ಸಿಹಿ ಮಾತುಗಳ ಕೃಷ್ಣ ಅವರು ಚೆನ್ನಾಗಿ ಓದಿಕೊಂಡಿದ್ದ, ಹಾಸ್ಯಪ್ರಜ್ಞೆ ಹೊಂದಿದ್ದ ವ್ಯಕ್ತಿ. ಅವರಂಥಹಾ ಸುಂದರ ವ್ಯಕ್ತಿತ್ವ ಹೊಂದಿರುವ ಮತ್ತೊಬ್ಬ ವ್ಯಕ್ತಿ ಸಿಗಲಾರರು. ನೀವು ನೀಡಿರುವ ಎಲ್ಲದಕ್ಕೂ ಧನ್ಯವಾದ. ನೀವು ಈಗ ನಿಮ್ಮ ಆತ್ಮೀಯ ಗೆಳೆಯನನ್ನು ಸೇರಿಕೊಂಡಿದ್ದೀರಿ’ ಎಂದು ಪೋಸ್ಟ್ ಮೂಲಕ ಹೇಳಿದ್ದಾರೆ.
ಅಂದರೆ ರಮ್ಯಾ ಅವರ ಸಾಕು ತಂದೆ ಆರ್.ಟಿ. ನಾರಾಯಣ್ ಅವರು ಎಸ್.ಎಂ. ಕೃಷ್ಣ ಅವರ ಆತ್ಮೀಯ ಗೆಳೆಯರಾಗಿದ್ದರು. ಕೃಷ್ಣ ಹಾಗೂ ನಾರಾಯಣ್ ಗೆಳೆಯರಾಗಿದ್ದರು. ಹಲವು ವರ್ಷಗಳ ಕಾಲ ಇಬ್ಬರೂ ಒಟ್ಟಿಗೆ ಟೆನ್ನಿಸ್ ಆಡುತ್ತಿದ್ದರು. ಇದೇ ಕಾರಣಕ್ಕೆ ರಮ್ಯಾ, ‘ನೀವೀಗ ನಿಮ್ಮ ಆತ್ಮೀಯ ಗೆಳೆಯನೊಟ್ಟಿಗೆ ಇರಲಿದ್ದೀರಿ’ ಎಂದು ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ..