ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿ ದರ್ಶನ್ ಬೇಲ್ ಪಡೆದು ಜೈಲಿಂದ ಹೊರ ಬಂದಿದ್ದಾರೆ.
ಆದರೆ, ಜಾಮೀನನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರ ಸುಪ್ರೀಂ ಕೊರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಬೆನ್ನಲ್ಲೇ ನಟಿ ರಮ್ಯಾ,ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ನ್ಯಾಯ ಸಿಗಬೇಕು ಎಂದು ಪೋಸ್ಟ್ ಮಾಡಿದ್ದರು. ಈ ಬೆನ್ನಲ್ಲೇ ನಟ ಪ್ರಥಮ್ ಸಹ ರಮ್ಯಾಗೆ ಸಾಥ್ ನೀಡಿದ್ದಾರೆ.
ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿರುವ ಪ್ರಥಮ್, ಇಷ್ಟೆಲ್ಲಾ ಆದರೂ ನೋಡದೇ ಮೌನವಾಗಿರುವ ನಮ್ಮೆಲ್ಲಾ ಕಲಾವಿದರಿಗೆ ಗೌರವಪೂರ್ವಕ ಸೆಲ್ಯೂಟ್ ಹೊಡೆಯುತ್ತಾ, ಈಗಲೂ ನಾವು ರಮ್ಯ ಮೇಡಮ್ ಪರ ನಿಲ್ಲದೇ ಹೋದರೆ ನಾವು ಕಲಾವಿದರಾಗುವುದಕ್ಕೆ, ಮನುಷ್ಯ ಅಂತ ಹೇಳಿಕೊಳ್ಳುವುದಕ್ಕೆ ನಾಚಿಕೆ ಆಗಬೇಕು ಎಂದು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.