ಚಿಕ್ಕಮಗಳೂರು: ರಾಜ್ಯ ಸರ್ಕಾರಕ್ಕೆ ರಂಭಾಪುರಿ ಶ್ರೀ(Rambhapuri Shri) ಸಲಹೆ ನೀಡಿದ್ದಾರೆ.
ಬಾಳೆಹೊನ್ನುರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿಗೆ (Guarantee Scheme) ಮುಕ್ಕಾಲು ಭಾಗ ಹಣ ಖರ್ಚು ಮಾಡಿದರೆ, ರಾಜ್ಯದ ನಡೆಸುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಇಂದಿನ ಸರ್ಕಾರವು, ಸರ್ಕಾರ ಹಿಂದಿನ ಸರ್ಕಾರದ ಹಲವು ಯೋಜನೆಗಳನ್ನು ತಡೆಹಿಡಿದಿದೆ. ಬಜೆಟ್‍ನಲ್ಲೂ ಮಠ ಮಂದಿರಗಳಿಗೆ ವಿಶೇಷವಾದ ಅನುದಾನ ಕೊಟ್ಟಿಲ್ಲ. ಅಭಿವೃದ್ಧಿಗೆ ಹಣ ಇಲ್ಲದೆ ಶಾಸಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅವರಿಗೆ ಜನರ ಬಳಿ ಹೋಗುವುದು ಕಷ್ಟವಾಗಿದೆಯಂತೆ. ಸ್ವಲ್ಪವಾದರೂ ಅವರಿಗೆ ಅನುದಾನ ನೀಡಬೇಕು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ವೀರಶೈವ – ಲಿಂಗಾಯುತರ ಸಭೆ ವಿಜಯೇಂದ್ರ ಅಭಿಮಾನಿಗಳು ಮಾಡುತ್ತಿರಬಹುದು. ವಿಜಯೇಂದ್ರ ಅವರೇ ಮಾಡಿಸುತ್ತಿದ್ದಾರೆ ಎನ್ನುವ ಭಾವನೆ ಇಲ್ಲ. ಅಭಿಮಾನಿಗಳು ಅಭಿಮಾನದಿಂದ ಮಾಡಿರಬಹುದು. ಒಳ್ಳೆಯ ನಾಯಕತ್ವ, ರಾಜ್ಯದ ಹಿತ ಚಿಂತನೆ ಕಾಪಾಡಲು ಜನರ ಸಹಕಾರ ಅವಶ್ಯಕ. ವಿಜಯೇಂದ್ರ ವಿಚಾರದಲ್ಲೂ ಒಳ್ಳೆಯದು ಮಾಡಿದಾಗ ಹೆಮ್ಮೆಯಿಂದ ಹೇಳುತ್ತೇವೆ ಎಂದಿದ್ದಾರೆ.