ಬಹುನಿರೀಕ್ಷಿತ ರಾಮಾಯಣ ಸಿನಿಮಾ ತಂಡ ದೊಡ್ಡ ಸಿಹಿಸುದ್ದಿಯೊಂದನ್ನು ನೀಡಿದೆ. ಚಿತ್ರದ ಟೈಟಲ್ ಘೋಷಣೆಯನ್ನೇ ವಿಶೇಷವಾಗಿಸಲು ಚಿತ್ರತಂಡ ರೆಡಿಯಾಗಿದೆ. ಇದೇ ಮೊದಲ ಬಾರಿಗೆ ಸಿನಿಮಾದ ಟೈಟಲ್ ಒಂದನ್ನು ವಿಡಿಯೋ ಮೂಲಕ ಅನೌನ್ಸ್ ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಕನ್ನಡಿಗ ಯಶ್ ನಟನೆಯ ರಾಮಾಯಣ ತೀವ್ರ ಕುತೂಹಲ ಮೂಡಿಸಿದೆ.
ಈಗಾಗಲೇ ಎರಡು ನಿಮಿಷ 36 ಸೆಕೆಂಡ್ ಗಳ ಟೈಟಲ್ ಘೋಷಣೆ ವಿಡಿಯೋ ಸಿದ್ಧವಾಗಿದ್ದು ಇಂದು ಸೆನ್ಸಾರ್ ಕೂಡಾ ಆಗಿದೆ. ನಿತೇಶ್ ತಿವಾರಿ ನಿರ್ದೇಶನದ ಸಿನಿಮಾದ ಈ ಟೈಟಲ್ ಘೋಷಣೆ ವಿಡಿಯೋ ಶೀಘ್ರವೇ ಅಭಿಮಾನಿಗಳ ಮುಂದೆ ಬರಲಿದೆ. ರಾಮನಾಗಿ ರಣಬೀರ್, ಸೀತೆಯಾಗಿ ಸಾಯಿ ಪಲ್ಲವಿ ಮತ್ತು ರಾವಣನಾಗಿ ಯಶ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.