ಬೆಂಗಳೂರು: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಪ್ರೋಟೋಕಾಲ್ ದುರ್ಬಳಕೆ ಮಾಡಿಕೊಂಡಿರುವ ಆರೋಪದಡಿಯಲ್ಲಿ ಡಿಜಿಪಿ ರಾಮಚಂದ್ರ ರಾವ್ ಅವರಿಗೆ ತನಿಖಾಧಿಕಾರಿ ಗೌರವ್ ಗುಪ್ತ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ.
ಇಂದು ಪೊಲೀಸ್ ಅಧಿಕಾರಿ ರಾಮಚಂದ್ರ ರಾವ್ ಅವರಿಗೆ ವಿಮಾನನಿಲ್ದಾಣದಿಂದ ರನ್ಯಾ ರಾವ್ ಅವರನ್ನು ಯಾವುದೇ ತಪಾಸಣೆ ಇಲ್ಲದೇ ವಿಐಪಿ ಪ್ರೋಟೋಕಾಲ್ ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪವಿದ್ದು, ಇದಕ್ಕೆ ಡಿಜಿಪಿ ರಾಮಚಂದ್ರ ರಾವ್ ಸಹಕರಿಸಿದ್ದಾರಾ? ಇಲ್ಲವಾ? ಎಂಬುದಕ್ಕೆ ತನಿಖೆ ಮಡೆಸಬೇಕಾಗಿದ್ದು, ತನಿಖೆಗೆ ಹಾಜರಾಗಲು ಇಂದು ನೋಟಿಸ್ ಜಾರಿಗೊಳಿಸುವ ಸಾಧ್ಯತೆಯಿದೆ.