ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮತ್ತೆ ತಮಿಳುನಾಡಿನ ರಾಮ್ ಜೀ ಗ್ಯಾಂಗ್ ಆಕ್ಟಿವ್ ಆಗಿದೆ. ಕಾರಿನ ಗ್ಲಾಸ್ ಒಡೆದು, ರಿಲೀಸ್ ಆಗಬೇಕಿದ್ದ ಸಿನಿಮಾದ ಚಿತ್ರೀಕರಣದ ಹಾರ್ಡ್ ಡಿಸ್ಕ್ ಕಳ್ಳತನ ಮಾಡಲಾಗಿದೆ.
‘ಐ ಆಮ್ ಗಾಡ್’ ಚಿತ್ರದ ಶೂಟಿಂಗ್ ಮಾಡಿ ವಿಡಿಯೋ ಇದ್ದ ಹಾರ್ಡ್ ಡಿಸ್ಕ್ ಅನ್ನು ವಿಜಯನಗರದಲ್ಲಿ ಗ್ಯಾಂಗ್ ಎಗರಿಸಿದೆ. ಐ ಆಮ್ ಗಾಡ್ ಚಿತ್ರದ ನಿರ್ಮಾಪಕ ಕಂ ಹೀರೋ ರವಿ ಗೌಡ ಕಾರ್ ಗ್ಲಾಸ್ ಒಡೆದು ಕಳವು ಮಾಡಲಾಗಿದೆ.

ನಟ ರವಿ ಗೌಡ ವಿಜಯನಗರದಲ್ಲಿ ಕಾರು ನಿಲ್ಲಿಸಿ ಹೋಗಿದ್ದರು. ಈ ವೇಳೆ ಕಾರಿನ ಬಳಿ ಬಂದ ರಾಮ್ ಜೀ ಗ್ಯಾಂಗ್ ಗ್ಲಾಸ್ ಒಡೆದಿದೆ. ಕಾರಿನಲ್ಲಿದ್ದ ಹಾರ್ಡ್ ಡಿಸ್ಕ್, 75 ಸಾವಿರ ಹಣ, ಒಂದು ಟ್ಯಾಬ್, ಒಂದು ಕಾಸ್ಟ್ಲಿ ಬ್ಯಾಗ್ ಕಳ್ಳತನ ಮಾಡಿದ್ದಾರೆ.
ರಾಮ್ ಜೀ ಗ್ಯಾಂಗ್ ಕೃತ್ಯ, ಓಡಾಟವು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬಿಎಂಡಬ್ಲ್ಯೂ ಕಾರ್ ಗ್ಲಾಸ್ ಪುಡಿ ಪುಡಿಯಾಗಿ ಬಿದ್ದಿತ್ತು. ಕೂಡಲೇ ವಿಜಯನಗರ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು, ಅಕ್ಕಪಕ್ಕದ ಸಿಸಿಟಿವಿ ತಪಾಸಣೆ ನಡೆಸಿದ್ದರು. ಪ್ರಕರಣ ದಾಖಲಿಸಿಕೊಂಡ ವಿಜಯನಗರ ಪೊಲೀಸರು ನೇರವಾಗಿ ತಮಿಳುನಾಡಿಗೆ ತೆರಳಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ತಂದೆ ಜಯಶೀಲನ್ ಹಾಗೂ ಆತನ ಮಗ ಕಳ್ಳತನ ಮಾಡಿರೋದು ಗೊತ್ತಾಗಿದ್ದು, ಪೊಲೀಸರು ಆರೋಪಿ ಜಯಶೀಲನ್‌ನನ್ನು ಅರೆಸ್ಟ್ ಮಾಡಿದ್ದಾರೆ. ಜಯಶೀಲನ್ ಮಗ ಎಸ್ಕೇಪ್ ಆಗಿದ್ದಾನೆ. ಆತನಿಗಾಗಿ ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ‘ಪ್ರೆಗ್ನೆಂಟ್ ಜಾಬ್’ ವಂಚಕರ ಬಲೆ: ಹಣದಾಸೆಗೆ 11 ಲಕ್ಷ ರೂ. ಕಳೆದುಕೊಂಡು ಕಂಗಾಲಾದ ಗುತ್ತಿಗೆದಾರ!



















