ಬೆಂಗಳೂರು, ಜೂನ್ 20, 2025: ಈ ಬಾರಿ ಪ್ರತಿಷ್ಠಿತ ‘ರ‍್ಯಾಲಿ ಆಫ್ ಬೆಂಗಳೂರು’ ಜೂನ್ 21 ಮತ್ತು 22 ರಂದು ಬೆಂಗಳೂರಿನ ಆರ್.ಆರ್.ನಗರದಲ್ಲಿರುವ ಶಕ್ತಿ ಹಿಲ್ ರೆಸಾರ್ಟ್‌ನಲ್ಲಿ ನಡೆಯಲಿದೆ. ವಿಜಯನಗರ ಆಟೋಮೋಟಿವ್ ಸ್ಪೋರ್ಟ್ಸ್ ಅಸೋಸಿಯೇಷನ್ (VASA) ಎಫ್‌ಎಂಎಸ್‌ಸಿಐ ಆಶ್ರಯದಲ್ಲಿ ಮತ್ತು ಇಂಡಿಯಾ ಮೋಟಾರ್ ಸ್ಪೋರ್ಟ್ಸ್‌ನ ನಾಯಕತ್ವದಲ್ಲಿ, ಬಿ.ಜಿ. ಸುಧೀಂದ್ರ ಅವರ ಪ್ರೋತ್ಸಾಹದೊಂದಿಗೆ ಈ ರ‍್ಯಾಲಿಯನ್ನು ಆಯೋಜಿಸಲಾಗಿದೆ.
ಜೆಕೆ ಟೈರ್ ಮೋಟಾರ್ ಸ್ಪೋರ್ಟ್ ಮತ್ತು ವಂಸಿ ಮೆರ್ಲಾ ಸ್ಪೋರ್ಟ್ಸ್ ಫೌಂಡೇಶನ್‌ನ ಬೆಂಬಲದೊಂದಿಗೆ ಹಲವು ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಈ ರ‍್ಯಾಲಿಯು INTSDRC-1 (ಒವರ್‌ಆಲ್), INTSDRC-2, ಪ್ರೊ ಸ್ಟಾಕ್, ವುಮೆನ್ಸ್, ಕಪಲ್ (INTSDRC-C), ಮತ್ತು ಕಾರ್ಪೊರೇಟ್ (INTSDRC-Corp) ಸೇರಿದಂತೆ ಅನೇಕ ಸ್ಪರ್ಧಾತ್ಮಕ ವಿಭಾಗಗಳನ್ನು ಒಳಗೊಂಡಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಚಾಲಕರು ಮತ್ತು ಸಿಬ್ಬಂದಿಗೆ ಸಮಗ್ರ ವೈದ್ಯಕೀಯ ನೆರವನ್ನು ಒದಗಿಸಲು ನ್ಯಾನೋ ಆಸ್ಪತ್ರೆಗಳು ಮತ್ತು ಟ್ರೂಸ್ಕ್ಯಾನ್ ಡಯಾಗ್ನೋಸ್ಟಿಕ್ಸ್ ಆರೋಗ್ಯ ಪಾಲುದಾರರಾಗಿ ಕೈಜೋಡಿಸಿವೆ. ಜೊತೆಗೆ, ಕೆಫೆ ಪೆಟ್ರಿಕ್ಕೋರ್, ಆಕ್ಟೇನ್‌ಪಿಟ್ಸ್ ಮತ್ತು ಗಿಗಾಬೈಟ್ ಇಂಕ್ (ಟೆಕ್ ಪಾರ್ಟ್‌ನರ್) ಮುಂತಾದ ಪ್ರಮುಖ ಸಹಯೋಗಿಗಳೂ ಈ ರ‍್ಯಾಲಿಗೆ ಬೆಂಬಲ ನೀಡುತ್ತಿವೆ.
ದೇಶದ ಅತಿ ಪುರಾತನ ಮೋಟಾರ್ ಸ್ಪೋರ್ಟ್ಸ್ ಸಂಸ್ಥೆಗಳಲ್ಲಿ ಒಂದಾದ ವಿಜಯನಗರ ಆಟೋಮೋಟಿವ್ ಸ್ಪೋರ್ಟ್ಸ್ ಅಸೋಸಿಯೇಷನ್ (VASA) ಈ ವರ್ಷ ತನ್ನ 30ನೇ ವರ್ಷಾಚರಣೆಯನ್ನು ಆಚರಿಸುತ್ತಿದ್ದು, ಇದು ಸಂಸ್ಥೆಯ ಪರಂಪರೆಗೆ ಮತ್ತಷ್ಟು ಹೆಮ್ಮೆ ತಂದಿದೆ.