ಚಿಕ್ಕಬಳ್ಳಾಪುರ :ಶಿಡ್ಲಘಟ್ಟದ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಾಂಗ್ರೆಸ್ ಮುಂಖಂಡ ರಾಜೀವ್ ಗೌಡನನ್ನು ಬಂಧಿಸಲಾಗಿದೆ.
ಕಳೆದ 14 ದಿನಗಳಿಂದ ಮಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ರಾಜೀವ್ ಗೌಡ ನಿನ್ನೆ ಸೋಮವಾರ ಕೇರಳದ ಗಡಿಭಾಗದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸದ್ಯ ಪೊಲೀಸರು ಆರೋಪಿ ರಾಜೀವ್ ಗೌಡನನ್ನು ಶಿಡ್ಲಘಟ್ಟಕ್ಕೆ ಕರೆತಂದಿದ್ದು, ವೈದ್ಯಕೀಯ ತಪಾಸಣೆ ಮಾಡಿಸಿದ್ದಾರೆ. ಈ ವೇಲೆ ರಾಜೀವ್ ಗೌಡ ತಮ್ಮ ಬೆಂಬಲಿಗರಿಗೆ ಖುಷಿಯಿಂದದೇ ಮಾತನಾಡಿಸಿ, ದೈರ್ಯವಾಗಿರಿ ಏನು ಆಗುವುದಿಲ್ಲ ಎಂದು ಹೇಳಿದ್ದಾರೆ.
ಕೈಗೆ ಸಿಗದ ರಾಜೀವ್ ಗೌಡನನ್ನು ಖಾಕಿ ಖೆಡ್ಡಾಗೆ ಕೆಡವಿದ್ದೇಗೆ?
ಪ್ರಕರಣ ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡು ಊರೂರು ಅಲೆಯತ್ತಿದ್ದ ಆರೋಪಿಯನ್ನು ಕೇರಳ ಗಡಿಯಲ್ಲಿ ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ. ಅಷ್ಟಕ್ಕೂ ರಾಜೀವ್ ಗೌಡ ಎಲ್ಲಿದ್ದಾನೆ ಎಂಬ ಬಗ್ಗೆ ಖಾಕಿ ಮಾಹಿತಿ ಕಲೆ ಹಾಕಿರೋದೇ ಬಹಳ ಇಂಟರೆಸ್ಟಿಂಗ್ ಆಗಿದೆ.
ಆರೋಪಿ ರಾಜೀವ್ ಗೌಡ ತನ್ನ ಸಹೋದರಿಗೆ ಕರೆ ಮಾಡಿದ್ದ ಎಂಬ ವಿಚಾರ ಪೊಲೀಸರಿಗೆ ಸಿಕ್ಕಿದ್ದು, ಈ ಬಗ್ಗೆ ಆಕೆಯನ್ನು ವಿಚಾರಣೆ ನಡೆಸಲಾಗಿತ್ತು. ಮಂಗಳೂರಲ್ಲಿ ಇದ್ದ ರಾಜೀವ್ ಗೌಡ ಬೇರೆ ರಾಜ್ಯಕ್ಕೆ ಎಸ್ಕೇಪ್ ಆಗಿದ್ದಾನೆ ಎಂಬ ಬಗ್ಗೆ ಮಾಹಿತಿ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದರು. ಆ ವೇಳೆ ಮಂಗಳೂರಿನ ಉದ್ಯಮಿ ಮೈಕಲ್ ಜೋಸೆಫ್ ರೇಗೋ ಜೊತೆ ಆರೋಪಿ ಇರೋದು ಕನ್ಫರ್ಮ್ ಆಗಿದೆ. ಆದರೆ ಮೈಕಲ್ ಜೋಸೇಫ್ ರೇಗೊ ಫೋನ್ ನಂಬರ್ ಪೊಲೀಸರ ಬಳಿ ಇರಲಿಲ್ಲ. ಎಷ್ಟು ಹುಡುಕಾಡಿದರೂ ಫೋನ್ ನಂಬರ್ ಸಿಗದ ಕಾರಣ ಸಿಬ್ಬಂದಿ ಪರದಾಟ ನಡೆಸಿದ್ದಾರೆ. ಅಂತಿಮವಾಗಿ ಪೊಲೀಸರು ಮಾಡಿದ್ದ ಮಾಸ್ಟರ್ ಪ್ಲ್ಯಾನ್ ಸಕ್ಸಸ್ ಆಗಿದೆ.
ಮೈಕಲ್ ನಂಬರ್ ಸಿಗದ ಕಾರಣ ಉದ್ಯಮಿಯ ಹಿನ್ನೆಲೆಯನ್ನು ಪೊಲೀಸರು ಕೆದಕಿದ್ದಾರೆ. ಮೈಕಲ್ ಮಗ ಬಹಳ ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಈ ಬಗ್ಗೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2018ರಲ್ಲಿ USAನಿಂದ ಬೆಂಗಳೂರು ಏರ್ಪೋರ್ಟ್ಗೆ ಬಂದಿದ್ದ ಮೈಕಲ್ ಮಗ, ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಹೀಗಾಗಿ ಮಂಗಳೂರಿನ ಪಬ್ ಒಂದರ ಮಾಲೀಕರಾಗಿರುವ ಮೈಕಲ್ ಸೋದರ ಸಂಬಂಧಿಯೊಬ್ಬರಿಗೆ ತಾವು ಚಿಕ್ಕಜಾಲ ಪೊಲೀಸರು ಅಂತಾ ದೂರವಾಣಿ ಕರೆ ಮಾಡಲಾಗಿದೆ. ಮೈಕಲ್ ಮಗನ ಸಾವಿನ ವಿಚಾರದಲ್ಲಿ ಅವರ ಜೊತೆ ಮಾತನಾಡಬೇಕು ಎಂದು ಹೇಳಿ ಪೊಲೀಸರು ನಂಬರ್ ಪಡೆದಿದ್ದಾರೆ. ಬಳಿಕ ಆ ನಂಬರ್ ಟ್ರೇಸ್ ಮಾಡಿ ಮೈಕಲ್ ಹಾಗೂ ಜೊತೆ ಇದ್ದ ರಾಜೀವ್ ಗೌಡನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಮುಂದಿನ ಬಜೆಟ್ನಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ‘ಮಹಾತ್ಮ ಗಾಂಧಿ’ ಹೆಸರಿಡುತ್ತೇವೆ | ಸಿಎಂ



















