ಮುಂಬೈ: ನಿತೀಶ್ ರಾಣಾ ಅವರ ಭರ್ಜರಿ ಬ್ಯಾಟಿಂಗ್ ಸೇರಿದಂತೆ ಬಿಗಿ ಬೌಲಿಂಗ್ ನಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ಗೆ ರಾಜಸ್ಥಾನ್ ರಾಯಲ್ಸ್ ತಂಡ ಸೋಲಿನ ರುಚಿ ತೋರಿಸಿದೆ.
ಆರ್ ಆರ್ ತಂಡವು ಚೆನ್ನೈ ವಿರುದ್ಧ 6 ರನ್ಗಳ ರೋಚಕ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿರುವ ಆರ್ಆರ್ 20 ಓವರ್ಗಳಿಗೆ 9 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿದೆ. ಗುರಿ ಬೆನ್ನತ್ತಿದ ಸಿಎಸ್ಕೆ 20 ಓವರ್ಗೆ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ ಸೋಲು ಕಂಡಿದೆ.
ಈ ಗೆಲುವಿನ ಮೂಲಕ ರಾಜಸ್ಥಾನ್ ತಂಡವು ಮೊದಲ ಗೆಲುವು ದಾಖಲಿಸಿದೆ. ಕೊನೆಯ ಓವರ್ವರೆಗೆ ನಡೆದ ರೋಮಾಂಚಕ ಪಂದ್ಯದಲ್ಲಿ ಕೊನೆಗೂ ಆರ್ ಆರ್ 6 ರನ್ಗಳ ರೋಚಕ ಜಯ ಸಾಧಿಸಿದೆ. ಸತತ ಎರಡು ಪಂದ್ಯಗಳಲ್ಲಿ ಸೋತ ನಂತರ, ರಾಜಸ್ಥಾನ ಮೂರನೇ ಪಂದ್ಯ ಗೆದ್ದಿದೆ. ಇನ್ನೊಂದೆಡೆ ಮೊದಲ ಪಂದ್ಯ ಗೆದ್ದಿದ್ದ ಚೆನ್ನೈ ತಂಡ ಸತತ ಎರಡು ಪಂದ್ಯ ಸೋತಿದೆ.