ವಿಜಯಪುರ : ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಸತ್ಯ ಹೇಳಿದ್ದ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾರಜೋಳ, ರಾಯರೆಡ್ಡಿ, ಬಿ.ಆರ್. ಪಾಟೀಲ್ ಆಳಂದ, ಶಿವಗಂಗ, ರಾಜು ಕಾಗೆ ಸತ್ಯ ಹೇಳಿದ್ದಾರೆ ಅವರನ್ನು ಯಾಕೆ ವಜಾ ಮಾಡಲಿಲ್ಲ? ರಾಜಣ್ಣ ಅವರನ್ನು ಮಾತ್ರ ವಜಾ ಮಾಡಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕರು ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರೆ. ಆದರೆ, ಸತ್ಯ ಹೇಳಿದರೆ ವಜಾ ಮಾಡುತ್ತಾರೆ. ಹೌಸಿಂಗ್ ಮಿನಿಸ್ಟರನ್ನೂ ವಜಾ ಮಾಡಬೇಕಿತ್ತಲ್ಲವೇ ? ಯಾಕೆ ವಜಾ ಮಾಡಲಿಲ್ಲ ? ಹೌಸಿಂಗ್ ಗೋಲ್ಮಾಲ್ ಬಗ್ಗೆ ಮಾತನಾಡಿದವರನ್ನಾದರು ವಜಾ ಮಾಡಬೇಕಿತ್ತಲ್ಲವೇ ? ಎಂದು ಸಾಲುಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ.
ರಾಜಣ್ಣ ದಲಿತ ಎನ್ನುವ ಕಾರಣಕ್ಕೆ ವಜಾ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದವರು ದಲಿತರನ್ನು ಒಡೆದು ಆಳುತ್ತಿದ್ದಾರೆ. 60 ವರ್ಷಗಳಿಂದ ಕಾಂಗ್ರೆಸ್ ಇದನ್ನೇ ಅನುಸರಿಸುತ್ತಾ ಬಂದಿದೆ ಎಂದು ಖಾರವಾಗಿ ನುಡಿದಿದ್ದಾರೆ.



















