ಬೆಂಗಳೂರು: ಸಹಕಾರ ಸಚಿವ ರಾಜಣ್ಣ (Rajanna) ಹನಿಟ್ರಾಪ್ (Honey Trap) ವಿಷಯವಾಗಿ ಕೆಂಡಾಮಂಡಲವಾಗಿದ್ದಾರೆ. ಈ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸದ್ದು ಮಾಡುತ್ತಿದೆ.
ಈ ಹಿನ್ನೆಲೆಯಲ್ಲಿ ಈಗ ಸಚಿವ ಕೆ.ಎನ್. ರಾಜಣ್ಣ ಅವರು ಹೈಕಮಾಂಡ್ ಗೆ ದೂರು ನೀಡಲು ಮುಂದಾಗಿದ್ದಾರೆ. ವಿಧಾನಸಭಾ ಅಧಿವೇಶನ ಮುಗಿದ ಬಳಿಕ ಸಿಎಂ ಸಿದ್ದರಾಮಯ್ಯ ಆಪ್ತ ಸಚಿವರು ದೆಹಲಿ ಚಲೋ ನಡೆಸಿ ಹೈಕಮಾಂಡ್ ನಾಯಕರ ಬಳಿ ದೂರು ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಬಾರಿ ಯಾವುದೇ ಕಾರಣಕ್ಕೂ ಹನಿಟ್ರ್ಯಾಪ್ ಹಿಂದೆ ಇದ್ದವರನ್ನು ಬಿಡಬಾರದು ಎಂದು ಸಚಿವರು ನಿರ್ಧರಿಸಿದ್ದಾರೆ. ರಾಜಣ್ಣ ಅವರು ಹನಿಟ್ರ್ಯಾಪ್ ಮಾಡಿದವರ ಹೆಸರನ್ನು ಬಹಿರಂಗ ಪಡಿಸಿದರೆ ಈ ಪ್ರಕರಣ ಮತ್ತಷ್ಟು ತಿರುವು ಪಡೆಯಲಿದೆ. ಹೀಗಾಗಿ ಹಲವರು ರಾಜಣ್ಣ ಅವರಿಗೆ ಹೆಸರು ಹೇಳುವಂತೆ ಕೇಳುತ್ತಿದ್ದಾರೆ.