ಹಿರಿಯ ಅಧಿಕಾರಿಗಳ ಜೊತೆ ರಣದೀಪ್ ಸಿಂಗ್ ಸುರ್ಜೆವಾಲ ಸಭೆ ನಡೆಸಿದ್ದ ವಿಚಾರಕ್ಕೆ ಸಚಿವ ಕೆ.ಎನ್ ರಾಜಣ್ಣ ಬೇಸರ ಹೊರಹಾಕಿದ್ದರು. ಇದಕ್ಕೆ ಸಂಬಂಧಿಸಿದ್ದಂತೆ ಮಾಜಿ ಸಂಸದ ಡಿ.ಕೆ.ಸುರೇಶ್ ರಿಯಾಕ್ಟ್ ಮಾಡಿದ್ದಾರೆ.
ಸಚಿವ ಕೆ.ಎನ್.ರಾಜಣ್ಣ ಬಹಳ ಹಿರಿಯರು. ಅವರಿಗೆ ರಾಜ್ಯದ ಎಲ್ಲಾ ಮಾಹಿತಿ ಗೊತ್ತಿರುತ್ತದೆ. ಅವರು ಅಷ್ಟು ದೊಡ್ಡ ಮಂತ್ರಿ ಆದಮೇಲೆ ಅವರಿಗೆ ಮಾಹಿತಿ ಇರಬಹುದು. ನಾನು ಸಣ್ಣ ಕಾರ್ಯಕರ್ತ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ.
ಇನ್ನು ಮಹದಾಯಿ ಯೋಜನೆಗೆ ಗೋವಾ ಕ್ಯಾತೆ ತೆಗೆದಿರುವ ಬಗ್ಗೆಯೂ ಮಾತನಾಡಿದ ಅವರು ಗೋವಾ ನಮ್ಮ ನೆರೆ ರಾಜ್ಯ. ಎರಡೂ ರಾಜ್ಯಗಳು ಅನ್ಯೋನ್ಯವಾಗಿ ಇವೆ. ಆದರೆ ಬಹಳಷ್ಟು ವರ್ಷಗಳಿಂದ ಇಲ್ಲ ಸಲ್ಲದ ಖ್ಯಾತೆ ತೆಗೆದು ತೊಂದರೆ ಕೊಡ್ತಿದ್ದಾರೆ. ಸುಪ್ರೀಂಕೋರ್ಟ್ ಸ್ಪಷ್ಟ ತೀರ್ಪು ಕೊಟ್ಟ ಮೇಲೂ ನೀರಾವರಿ ಯೋಜನೆ ಆಗ್ತಿಲ್ಲ. ಬಿಜೆಪಿ ಅವರ ಅಧಿಕಾರ- ಕೇಂದ್ರ ಸರ್ಕಾರವನ್ನು ಬಳಸಿಕೊಂಡು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿರುವುದು ಎದ್ದು ಕಾಣುತ್ತದೆ ಎಂದು ಕಿಡಿಕಾರಿದರು. ಇದೇ ವೇಳೆ ಆದಷ್ಟು ಬೇಗ ಕುಡಿಯುವ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಕೇಂದ್ರ ಸರಿಪಡಿಸಲಿ ಎಂದು ಮನವಿ ಮಾಡಿದ್ದಾರೆ.