ಟಾಲಿವುಡ್ ಮಾಸ್ಟರ್ ಡೈರೆಕ್ಟರ್ ರಾಜಮೌಳಿ ಸಿನಿಮಾವನ್ನ ಎಷ್ಟು ಪ್ರೀತಿಸುತ್ತಾರೋ ಅಷ್ಟೇ ಪ್ರೇಕ್ಷಕರನ್ನು ಆರಾಧಿಸುತ್ತಾರೆ. ಚಿಕ್ಕ ಹೆಜ್ಜೆಗಳಿಂದ ಶುರು ಮಾಡಿದ ಜರ್ನಿ, ದೊಡ್ಡ ಸಾಧನೆಯವರೆಗೂ ಬಂದು ನಿಂತಿದ್ದರೂ ರಾಜಮೌಳಿ ಸಾಮಾಜಿಕ ಪ್ರಜ್ಞೆ ಮರೆತಿಲ್ಲ. ರಾಜಮೌಳಿ ಸಿನಿಮಾಗಳಂತೆ ಜನಕಾಳಜಿಯಲ್ಲೂ ಎತ್ತಿದ ಕೈ. ರಾಜಮೌಳಿ ಮುಂದಿನ ಹೆಜ್ಜೆ ಇಡೋ ಮುನ್ನ 100 ಸಲ ಯೋಚನೆ ಮಾಡುತ್ತಾರೆ ಎಂಬುದು ಮತ್ತೊಮ್ಮೆ ಪ್ರೂವ್ ಆಗಿದೆ.

ರಾಜಮೌಳಿ ಮಹೇಶ್ ಬಾಬು ಜೊತೆ ಸಿನಿಮಾ ಮಾಡ್ತಿರೋ ವಿಚಾರ ಹಳೆಯದು. ಹೊಸ ವಿಷಯ ಏನಪ್ಪಾ ಅಂದ್ರೆ, ನಾಳೆಯೇ ಈ ಸಿನಿಮಾದ ಟೈಟಲ್ ರಿಲೀಸ್ ಆಗ್ತಿದೆ. ರಾಮೋಜಿ ಫಿಲಂ ಸಿಟಿಯಲ್ಲಿ ಇದಕ್ಕಾಗಿ ಅದ್ದೂರಿ ವೇದಿಕೆ ಹಾಕಲಾಗಿದೆ. ಮಹೇಶ್ ಬಾಬು ಮತ್ತು ಪ್ರಿಯಾಂಕಾ ಚೋಪ್ರಾ ನೋಡೋಕೆ ಬರೋ ಅಭಿಮಾನಿಗಳು ಯಾವ ಹಂತಕ್ಕೆ ಹೋಗಬಹುದು ಅಂತ ರಾಜಮೌಳಿ ಮೊದಲೇ ಹುಷಾರಾಗಿಬಿಟ್ಟಿದ್ದಾರೆ. ಅಭಿಮಾನದ ಹೆಸರಲ್ಲಿ ದಯವಿಟ್ಟು ಹುಚ್ಚಾಟ ಮಾಡಿಕೊಂಡು ಜೀವಕ್ಕೆ ಸಂಚಕಾರ ತಂದುಕೊಳ್ಳಬೇಡಿ ಅಂತ ಕಳಕಳಿಯಿಂದ ರಾಜಮೌಳಿ ಪ್ರಾರ್ಥಿಸಿದ್ದಾರೆ.
ಮಹೇಶ್ ಬಾಬು ಕೂಡ ಈ ಸಿನಿಮಾ ಮೇಲೆ ಸಖತ್ ಹೊಪ್ಸ್ ಇಟ್ಟುಕೊಂಡಿದ್ದಾರೆ. ಪಿಗ್ಗಿ ಜೊತೆ ಫಸ್ಟ್ ಟೈಮ್ ಸ್ಕ್ರೀನ್ ಶೇರ್ ಮಾಡ್ತಿರೋ ಮಹೇಶ್ ಬಾಬುರನ್ನ ಬೇರೆ ತರ ತೋರಿಸೋ ಪ್ಲ್ಯಾನ್ ರಾಜಮೌಳಿಗಿದೆ. ಒಂದು ಪಕ್ಕ ಆಕ್ಷನ್ ಹೈಡ್ರಾಮಾ ಸೃಷ್ಟಿಸೋ ರಾಜಮೌಳಿ, ತಮ್ಮ ಸಿನಿಮಾದ ಓವರ್ ಆಲ್ ವ್ಯೂಗಳನ್ನ ಗಮನಿಸುವುದೇ ಒಂದು ವಿಶೇಷ. ಅಭಿಮಾನಿಗಳಿಗೆ ರಾಜಮೌಳಿ ಸಂದೇಶ ಗಟ್ಟಿಯಾಗೇ ರವಾನೆಯಾಗಿದೆ.
‘ಗ್ಲೋಬ್ ಟ್ರೋಟರ್’ ಎಂಬ ವರ್ಕಿಂಗ್ ಶೀರ್ಷಿಕೆಯನಿಟ್ಟುಕೊಂಡು ರಾಜಮೌಳಿ ಈ ಸಿನಿಮಾಗೆ ಕೈ ಹಾಕಿದ್ದಾರೆ. ಭಾರತೀಯ ಚಿತ್ರರಂಗದ ಎಲ್ಲಾ ಸಾಧ್ಯತೆಗಳನ್ನ ಮೀರಿ ಈ ಸಿನಿಮಾ ಬರುತ್ತೆ ಅಂತ ರಾಜಮೌಳಿ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಬಾಹುಬಲಿ ಮತ್ತು RRR ದಾಖಲೆಗಳನ್ನ ಈ ಚಿತ್ರ ಮುರಿದು ಹಾಕುತ್ತಾ ಗೊತ್ತಿಲ್ಲ. ಆದರೆ ಅವುಗಳನ್ನೂ ಮೀರಿದ ಒಂದು ಸಿನಿಮಾಟಿಕ್ ಅದ್ಭುತವಂತೂ ಪಕ್ಕಾ ಇದ್ದೇ ಇರುತ್ತೆ ಎಂಬುದೇ ಸದ್ಯದ ಟಾಲಿವುಡ್ ನಂಬಿಕೆ.
ಅಂದಹಾಗೇ ಈ ಟೈಟಲ್ ಲಾಂಚ್ ಕಾರ್ಯಕ್ರಮ ಜಿಯೋ ಹಾಟ್ ಸ್ಟಾರ್‌ನಲ್ಲೂ ಲೈವ್‌ನಲ್ಲಿ ಪ್ರಸಾರವಾಗುತ್ತೆ. ಆದ್ದರಿಂದ ಕಾರ್ಯಕ್ರಮ ನೋಡಲು ಬಂದು ಯಾವುದೇ ಕಾಲ್ತುಳಿತ ಸಂಭವಿಸದಿರಲಿ ಎಂಬುದೇ ರಾಜಮೌಳಿ ದೂರದೃಷ್ಟಿ. ಮಹೇಶ್ ಬಾಬು ಫ್ಯಾನ್ಸ್ ಒಟ್ಟಿಗೆ ನುಗ್ಗಿ ಅಲ್ಲಿ ಅವಘಡಗಳು ಸಂಭವಿಸಬಾರದು ಎಂಬ ಕಾಳಜಿ ಜಕ್ಕಣ್ಣನಿಗಿದೆ. ಇತ್ತೀಚಿಗೆ ನಡೆದ ಕಾಲ್ತುಳಿತ ಪ್ರಕರಣಗಳು ಕಣ್ಣ ಮುಂದೆಯೇ ಸುಡುತ್ತಿದ್ದು, ರಾಜಮೌಳಿಯ ಸಮಯ ಪ್ರಜ್ಞೆ ನಿಜಕ್ಕೂ ಶ್ಲಾಘನೀಯ ಅಲ್ವಾ?
ಇದನ್ನೂ ಓದಿ : ಬುಮ್ರಾ ದಾಳಿಗೆ ಹರಿಣ ಪಡೆ ಶೇಕ್ | ಅಶ್ವಿನ್ ದಾಖಲೆ ಉಡೀಸ್ ಮಾಡಿದ ಯಾರ್ಕರ್ ಕಿಂಗ್!



















