ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಜನರ ನೆತ್ತಿ ಸುಡುತ್ತಿದೆ. ಹಲವೆಡೆ ದಾಖಲೆಯ ಬಿಸಿಲು ಜನರನ್ನು ಹೈರಾಣಾಗಿಸಿದೆ. ಈ ಮಧ್ಯೆ ಮಳೆರಾಯ ಭೂಮಿಗೆ ತಂಪು ನೀಡಿದ್ದಾನೆ.
ಹಲವು ಪ್ರದೇಶಗಳಲ್ಲಿ ಇಂದು ಸಂಜೆ ವರ್ಷಧಾರೆಯಾಗಿದೆ. ವಿಜಯನಗರ (Vijayanagara) ಜಿಲ್ಲೆಯ ಹರಪನಹಳ್ಳಿ, ಹೊಸಪೇಟೆಯಲ್ಲಿ ಮಳೆಯಾಗಿದೆ. ಹರಪನಹಳ್ಳಿಯಲ್ಲಿ ಆಲಿಕಲ್ಲು ಮಳೆಯಾಗಿದೆ. ಮುಂಗಾರು ಪೂರ್ವ ಮಳೆಗೆ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಬಾಗಲಕೋಟೆ, ಹಾವೇರಿ, ದಾವಣಗೆರೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಳೆಯಾಗಿದೆ. ಕರಾವಳಿಯ ಕೆಲವು ಪ್ರದೇಶಗಳಲ್ಲಿ ಕೂಡ ಮಳೆಯಾಗಿದೆ.