ಗದಗ : ಗದಗ ಜಿಲ್ಲೆಯ ರೋಣ ತಾಲೂಕಿನ ಬೋಪಳಾಪೂರ ಗ್ರಾಮದಲ್ಲಿ ಮಳೆ ಕೊರತೆಯಿಂದ ಕಂಗಾಲಾದ ರೈತರು ಕತ್ತೆ ಮದುವೆ ಮಾಡಿಸಿದ್ದಾರೆ. ಕತ್ತೆ ಮದುವೆ ಮಾಡಿಸಿದರೆ ಮಳೆಯಾಗುತ್ತದೆ ಎಂಬ ನಂಬಿಕೆಯಲ್ಲಿ ಗ್ರಾಮಸ್ಥರು ಕತ್ತೆ ಮದುವೆ ಮಾಡಿಸಿದ್ದಾರೆ.
ಮಧುಮಕ್ಕಳಂತೆ ಕತ್ತೆಗಳಿಗೆ ಬಾಸಿಂಗ, ಕಂಕಣ ಕಟ್ಟಿ ಶೃಂಗಾರ ಮಾಡಿ, ಗ್ರಾಮದ ಮೈಲಾರ ಲಿಂಗ ದೇವಾಸ್ಥಾನದಲ್ಲಿ ಮದುವೆ ಮಾಡಲಾಗಿದೆ.
ಮಳೆ ಕೊ೦ರತೆಯಿಂದ ಹೆಸರು, ಮೆಕ್ಕೆ ಜೋಳ ಮುಂತಾದ ಬೆಳೆಗಳು ಬಾಡಿಹೋಗುತ್ತಿರುವುದರಿಂದ ರೈತ ಸಮೂಹವು ಚಿಂತೆಗೀಡಾಗಿ, ಕತ್ತೆ ಮದುವೆ ಮಾಡಿಸಿದ್ದಾರೆ.



















