ಬೆಂಗಳೂರು: ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ ಉದ್ಯೋಗ ಪಡೆಯಬೇಕು ಎಂದು ಬಯಸುತ್ತಿದ್ದೀರಾ? ಅದರಲ್ಲೂ, ಬೆಂಗಳೂರಿನಲ್ಲೇ ವೃತ್ತಿಜೀವನ ಆರಂಭಿಸಬೇಕು ಎಂಬ ಆಸೆ ಇದೆಯೇ? ಹಾಗಾದರೆ, ನಿಮಗೊಂದು ಒಳ್ಳೆಯ ಅವಕಾಶ ಒದಗಿ ಬಂದಿದೆ. ರೈಲ್ವೆ ಇಲಾಖೆಯ ಘಟಕವಾಗಿರುವ ರೈಲ್ ವ್ಹೀಲ್ ಫ್ಯಾಕ್ಟರಿಯಲ್ಲಿ (Rail Wheel Factory Recruitment 2025) ಖಾಲಿ ಇರುವ 15 ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಫ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಹುದ್ದೆಗಳ ಸಂಕ್ಷಿಪ್ತ ವಿವರ
ಹುದ್ದೆಯ ಹೆಸರು: ರೈಲ್ ವ್ಹೀಲ್ ಫ್ಯಾಕ್ಟರಿ
ಹುದ್ದೆಗಳ ಸಂಖ್ಯೆ: 15
ಉದ್ಯೋಗ ಸ್ಥಳ: ಬೆಂಗಳೂರು
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ನವೆಂಬರ್ 29
ಅರ್ಜಿ ಸಲ್ಲಿಕೆ ವಿಧಾನ: ಆಫ್ ಲೈನ್
ಬೆಂಗಳೂರಿನ ಯಲಹಂಕದಲ್ಲಿ ರೈಲ್ ವ್ಹೀಲ್ ಫ್ಯಾಕ್ಟರಿ ಘಟಕವಿದೆ. ಇಲ್ಲಿ 15 ಸ್ಪೋರ್ಟ್ಸ್ ಪರ್ಸನ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಕನಿಷ್ಠ 18 ವರ್ಷದಿಂದ ಗರಿಷ್ಠ 25 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲಿಗೆ rwf.indianrailways.gov.in ವೆಬ್ ಸೈಟ್ ಗೆ ಭೇಟಿ ನೀಡಬೇಕು. ನೇಮಕಾತಿ ಕುರಿತ ಅಧಿಸೂಚನೆಯನ್ನು ಗಮನವಿಟ್ಟು ಓದಿಕೊಂಡು, ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಹಾಗೆಯೇ, ಅರ್ಜಿ ನಮೂನೆಯ ಪ್ರಿಂಟೌಟ್ ತೆಗೆದುಕೊಂಡು, ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಬೇಕು.
ಅರ್ಜಿ ಕಳುಹಿಸಬೇಕಾದ ವಿಳಾಸ
Rail Wheel Factory, General Manager Office, Labor Department, Yelahanka, Bangalore-560064
ಇದನ್ನೂ ಓದಿ : ಸಿಖ್ ಯಾತ್ರಾರ್ಥಿಗಳ ಜೊತೆ ತೆರಳಿದ್ದ 12 ಹಿಂದೂಗಳಿಗೆ ಪಾಕಿಸ್ತಾನ ಪ್ರವೇಶ ನಿರಾಕರಣೆ



















