ಕಲಬುರಗಿ: ಜಿಲ್ಲೆಯ ಆಳಂದ ಪಟ್ಟಣದಲ್ಲಿ ಇರುವ ಐದು ನಕಲಿ ವೈದ್ಯರ ಕ್ಲಿನಿಕ್ ಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಎಂಬಿಬಿಎಸ್ ಪದವಿ ಪಡೆಯದೇ ನಕಲಿ ವೈದ್ಯ ವೃತ್ತಿ ನಡೆಸುತ್ತಿದ್ದ ಅಶ್ವಿನಿ ಕ್ಲಿನಿಕ್, ಅವಿನಾಶ್ ಕ್ಲಿನಿಕ್ ಸೇರಿದಂತೆ ಐದು ಕ್ಲಿನಿಕ್ ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆಳಂದ ಟಿಹೆಚ್ಓ ಡಾ. ಸುಶಿಲಕುಮಾರ್ ಅಂಬುರೆ ಅವರ ನೈತೃತ್ವದಲ್ಲಿ ಮೂರು ಕ್ಲಿನಿಕ್ ಗಳನ್ನು ಜಪ್ತಿ ಮಾಡಿ ಇಬ್ಬರಿಗೆ ನೋಟಿಸ್ ನೀಡಲಾಗಿದೆ.