ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ(Mahakumbha Mela) ನಾನಾ ಅಚ್ಚರಿಗೆ ಕಾರಣವಾಗುತ್ತಿವೆ. ಐಐಸಿ ಬಾಂಬೆಯ ವಿದ್ಯಾರ್ಥಿಯೆಂದು ಹೇಳಿಕೊಂಡಿರುವ ಅಭಯ್ ಸಿಂಗ್ (Abhay Singh) ಅಲಿಯಾಸ್ ಐಐಟಿ ಬಾಬಾ ಸೋಶಿಯಲ್ ಮೀಡಿಯಾ ಸೆನ್ಸೇಷನ್(IIT Baba is a social media sensation) ಆಗಿರುವ ನಡುವೆಯೇ ಮಾಜಿ ಡಿಸಿಯೊಬ್ಬರು ಸನ್ಯಾಸಿಯಾಗಿ ಅಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಬೇರಾರೂ ಅಲ್ಲ ರಾಯಚೂರಿನಲ್ಲಿ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಐ. ಆರ್ ಪೆರುಮಾಳ್.(I. R Perumal.)
ಪೆರುಮಾಳ್ ಅವರು 1993-94ರಲ್ಲಿ ರಾಯಚೂರು ಜಿಲ್ಲಾಧಿಕಾರಿ(Raichur District Collector) ಕಾರ್ಯನಿರ್ವಹಿಸಿದ್ದರು. ಬಳಿಕ ಕರ್ನಾಟಕ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿಯಾಗಿಯೂ(Karnataka State Youth Empowerment and Sports Department Secretary) ಸೇವೆ ಸಲ್ಲಿಸಿದ್ದರು. ತಮಿಳುನಾಡು ಮೂಲದವರಾಗಿರುವ ಅವರು ರಾಜ್ಯದ ನಾನಾ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.
2012ರಲ್ಲಿ ವೃತ್ತಿಯಿಂದ ನಿವೃತ್ತಿ ಪಡೆದಿದ್ದ ಅವರು 2014ರಲ್ಲಿ ತಮಿಳುನಾಡಿನ ಮಧುರೈ ಜಿಲ್ಲೆಯ ಇರಂಜುಮುಡಿ ಶಿವನ ದೇವಾಲಯ ಬಳಿ ಮಠ ಕಟ್ಟಿಕೊಂಡಿದ್ದರು. ನಂತರ ಸನ್ಯಾಸತ್ವ ಸ್ವೀಕರಿಸಿ ಶಿವಯೋಗಿ ಪೆರುಮಾಳ್ ಸ್ವಾಮೀಜಿ ಆಗಿದ್ದರು. ಶಿವಯೋಗಿ ಪೆರುಮಾಳ್ ಸ್ವಾಮೀಜಿಯಾಗಿರುವ ಅವರು ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುವ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
‘ಐಐಟಿ ಬಾಬಾ’ ಅಭೇ ಸಿಂಗ್
ಕೆಲವು ದಿನಗಳ ಹಿಂದೆ ಮಹಾ ಕುಂಭಮೇಳದಲ್ಲಿ(Kumbh Mela) ಐಐಟಿ ಬಾಬಾ ಖ್ಯಾತಿಯ ಅಭಯ್ ಸಿಂಗ್ (Abhay Singh) ಗಮನ ಸೆಳೆದಿದ್ದರು. ಅವರು ಐಐಟಿ ಬಾಂಬೆಯ ಮಾಜಿ ಏರೋಸ್ಪೇಸ್ ಎಂಜಿನಿಯರ್ ಆಗಿದ್ದರು. ಹರಿಯಾಣ ಮೂಲದ ಅಭಯ್ ಸಿಂಗ್ ಐಐಟಿ ಬಾಂಬೆಯಿಂದ ಏರೋಸ್ಪೇಸ್ ಎಂಜಿನಿಯರಿಂಗ್ ಮಾಡಿ ಆಧ್ಯಾತ್ಮಿಕತೆಗಾಗಿ ಎಲ್ಲವನ್ನೂ ತೊರೆದು ಈಗ ಐಐಟಿ ಬಾಬಾ ಎನಿಸಿಕೊಂಡಿದ್ದಾರೆ. ವಿವಿಧ ಶೈಕ್ಷಣಿಕ ಮಾರ್ಗಗಳನ್ನು ಅನ್ವೇಷಿಸಿದ ನಂತರ, ಸಿಂಗ್ ಆಧ್ಯಾತ್ಮಿಕತೆಯಲ್ಲಿ ತಮ್ಮ ನಿಜವಾದ ಗುರಿಯನ್ನು ಕಂಡುಕೊಂಡಿದ್ದಾರೆ.
ಅಭಯ್ ಸಿಂಗ್ ಐಐಟಿ ಬಾಂಬೆಯಲ್ಲಿ 4 ವರ್ಷಗಳನ್ನು ಕಳೆದಿದ್ದರು ಮತ್ತು ಅಲ್ಲಿ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದರು. ಆದರೆ ಪದವಿಯ ನಂತರ ಅವರು ತಮ್ಮ ವೃತ್ತಿ ಜೀವನ ತ್ಯಜಿಸಿ ನಂತರ ಡಿಸೈನ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಮೂಲಕ ಅವರು ಕಲೆಯ ಕಡೆಗೆ ಆಕರ್ಷಿತರಾದರು. ಈ ಸಮಯದಲ್ಲಿ ಸಿಂಗ್ ಛಾಯಾಗ್ರಹಣದ ಬಗ್ಗೆ ಆಳವಾದ ಉತ್ಸಾಹವನ್ನು ಬೆಳೆಸಿಕೊಂಡರು. ಇದು ಅವರ ವೃತ್ತಿಜೀವನದಲ್ಲಿ ಪ್ರಮುಖ ತಿರುವು ನೀಡಿತ್ತು.