ರಾಯಚೂರು: ದೇವದುರ್ಗದ ಗಬ್ಬೂರು ಪೊಲೀಸ್ ಠಾಣೆಯ ಪಿಎಸ್‌ಐ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ರಾಯಚೂರು ತಾಲೂಕಿನ ಮುರಾನಪುರ ಬಳಿ ಮರಕ್ಕೆ ಡಿಕ್ಕಿ ಹೊಡೆದು ಅಪಖಾತಕ್ಕಿಡಾಗಿದೆ. ಇದರಲ್ಲಿ ಪಿಎಸ್‌ಐ ಸೇರಿ ಕುಟುಂಬದ ಐವರಿಗೆ ಗಾಯವಾಗಿದೆ.
ಅಪಘಾತದಲ್ಲಿ ಪಿಎಸ್‌ಐ ಅರುಣ್ ಕುಮಾರ್ ರಾಥೋಡ್ ಅವರ ಕಾಲಿಗೆ ಗಂಭೀರ ಗಾಯಗಳಾಗಿವೆ. ಅವರ ಪತ್ನಿ, ಇಬ್ಬರು ಮಕ್ಕಳು ಹಾಗೂ ಕಾರು ಚಾಲಕನಿಗೂ ಗಾಯಗಳಾಗಿವೆ.
ಚಿಕಿತ್ಸೆಗಾಗಿ ಗಾಯಾಳುಗಳನ್ನು ಹತ್ತಿರದ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಡ್ಲಿಗಿಯಲ್ಲಿ ಸಿಎಂ ಕಾರ್ಯಕ್ರಮದ ಬಂದೊಬಸ್ತ್‌ಗೆ ಪಿಎಸ್‌ಐ ತೆರಳಿದ್ದರು. ಮರಳಿ ಬರುವಾಗ ಕುಟುಂಬದವರೊಂದಿಗೆ ಖಾಸಗಿ ಕಾರಿನಲ್ಲಿ ಬರುತ್ತಿದ್ದರು ಈ ವೇಳೆ ಅಪಘಾತ ನಡೆದಿದೆ.
ಇದನ್ನೂ ಓದಿ: ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ | ಇಂದು ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಿರುವ ಜಿ.ಪರಮೇಶ್ವರ್



















