ರಾಯಚೂರು : ಹಳೇ ದ್ವೇಷದ ಹಿನ್ನಲೆ ಏಕಾಏಕಿ ಮನೆಗೆ ನುಗ್ಗಿ ಹಲ್ಲೆಗೈದ ಘಟನೆ ರಾಯಚೂರಿನಲ್ಲಿ ನಡೆದಿದೆ. ಮದುವೆ ಸಮಾರಂಭದಲ್ಲಿ ಡಿಜೆ ಆಫ್ ಮಾಡಿದ ಕಾರಣದಿಂದ ಕಟ್ಟಿಗೆ, ಬೆತ್ತ ಹಿಡಿದು ಹಲ್ಲೆ ಮಾಡಿದ್ದಾರೆ.
ರವಿವಾರ ರಾತ್ರಿ 7:30ರ ಸುಮಾರಿಗೆ ಮಾರೆಪ್ಪ ಎಂಬಾತನ ತಂಗಿ ಮದುವೆ ಮೆರವಣಿಗೆ ಹೋಗುತ್ತಿತ್ತು. ಆ ವೇಳೆ ಡಿಜೆ ಸೌಂಡ್ ಬಂದ್ ಮಾಡಿ ಏರಿಯಾದಲ್ಲಿ ನಿಧನರಾಗಿದ್ದಾರೆ ಎಂದು ಬಡಾವಣೆ ಜನ ಹೇಳಿದ್ದರು. ಜನರ ಮಾತು ಕೇಳಿ ಡಿಜೆ ಸೌಂಡ್ ಬಂದ್ ಮಾಡಿದ್ದ ಮಾರೆಪ್ಪ ಕುಟುಂಬಸ್ಥರು. ಆದ್ರೆ ಯಾಕೆ ಸೌಂಡ್ ಬಂದ್ ಮಾಡಿದಿರಿ ಎಂದು ಕಾವಲಿ ಈರಣ್ಣ ಹಾಗೂ ಕುಟುಂಬಸ್ಥರಿಂದ ತಗಾದೆ ನಡೆದಿದೆ. ಮಾತಿಗೆ ಮಾತು ಬೆಳೆದು ಅಂದೇ ಜಗಳವಾಗಿ ಮುಗಿದಿತ್ತು.
ಆದರೆ ಆ ದ್ವೇಷ ಬಿಡದೇ ನಿನ್ನೆ ಮಾರೆಪ್ಪ ಮನೆಗೆ ನುಗ್ಗಿದ ಕಾವಲಿ ಈರಣ್ಣ ಹಾಗೂ ಕುಟುಂಬಸ್ಥರು ಕಟ್ಟಿಗೆ, ಬೆತ್ತ, ಕಾರದ ಪುಡಿ, ಕಲ್ಲು ಹಾಗೂ ಕಬ್ಬಿಣದ ರಾಡುಗಳಿಂದ ಹಲ್ಲೆಗೈದಿದ್ದಾರೆ. ಇದೀಗ ಓರ್ವನ ಸ್ಥಿತಿ ಗಂಭೀರವಾಗಿದ್ದು, ಐವರಿಗೆ ಗಾಯವಾಗಿದೆ. ಈ ಹಲ್ಲೆ ಇದೇ ಮೊದಲಲ್ಲ ಸತತ ಮೂರನೇ ಬಾರಿಗೆ ಹಲ್ಲೆ ಮಾಡುತ್ತಿದ್ದಾರೆ ಎಂದು ಮಾರೆಪ್ಪ ಆರೋಪಿಸಿದ್ದಾರೆ. ಇದೀಗ ಮಾನ್ವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ : ಪೋಕ್ಸೋ ಪ್ರಕರಣ | ಬಿಎಸ್‌ವೈ ಸೇರಿ ನಾಲ್ವರಿಗೆ ಸಮನ್ಸ್ ಜಾರಿ



















