ಬೆಂಗಳೂರು : ಸಚಿವ ಸ್ಥಾನದಿಂದ ರಾಜಣ್ಣ ಅವರನ್ನು ವಜಾಗೊಳಿಸಿರುವುದನ್ನು ಸಾರ್ವಜನಿಕರಿಗೆ ತಿಳಿಸಲು ಚರ್ಚಿಸಿದ್ದೇವೆ, ಹಿಂದೆ ಅಧಿವೇಶನದಲ್ಲಿ ರಾಜಣ್ಣ ಪರವಾಗಿ ಸಿ.ಡಿ ವಿಚಾರದಲ್ಲಿ ಹೋರಾಟ ಮಾಡಿದ್ದೆವು, ಈಗ ರಾಜಣ್ಣ ಪರ ಅವರದೇ ಪಕ್ಷದ ಕೆಲವರು ಪಿತೂರಿ ಮಾಡಿರುವುದು ಸ್ಪಷ್ಟವಾಗಿದೆ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ವರದಿಗಾರರಿಗೆ ಸ್ಪಂದಿಸಿದ ಅವರು, ರಾಜಣ್ಣ ಅವರನ್ನು ವಜಾ ಮಾಡಿರುವುದು ಅವರಿಗೆ ಮಾಡಿದ ಅವಮಾನ. ಮೊದಲು ವಾಲ್ಮೀಕಿ ಸಮುದಾಯದ ನಾಗೇಂದ್ರ, ಈಗ ರಾಜಣ್ಣ, ಸರ್ಕಾರಕ್ಕೆ ವಾಲ್ಮೀಕಿ ಸಮುದಾಯವನ್ನು ನೋಡಿದರೆ ಆಗುವುದಿಲ್ಲ ಎಂದನ್ನಿಸುತ್ತದೆ. ವಾಲ್ಮೀಕಿ ಸಮುದಾಯದ ವಿರುದ್ಧ ಸರ್ಕಾರ ಇದೆ ಎನ್ನುವುದು ಇಂತಹ ಬೆಳವಣಿಗೆ ಗಮನಿಸಿದರೆ ಸ್ಪಷ್ಟವಾಗುತ್ತದೆ ಎಂದಿದ್ದಾರೆ.
ಸತ್ಯ ಹೇಳಿದ್ದಕ್ಕೆ “ರಾಹು ಕಾಲದ ಗಾಂಧಿಯಾಗಿ ರಾಹುಲ್ ಗಾಂಧಿ ರಾಜಣ್ಣ ಮೇಲೆ ಬಿದ್ದಿದ್ದಾರೆ”. ಪಕ್ಷ ಮತ್ತಷ್ಟು ಸಂಘಟಿಸುವ ಬಗ್ಗೆ ಚರ್ಚಿಸಿದ್ದೇವೆ ಎಂದಿದ್ದಲ್ಲದೇ, ಆರ್ ಸಿಬಿ ಕಾಲ್ತುಳಿತ, ಬೆಳೆಹಾನಿ, ಧರ್ಮಸ್ಥಳ ಬಗ್ಗೆ ಅಪಪ್ರಚಾರ, ಧರ್ಮಸ್ಥಳದಲ್ಲಿ ಅಗೆತ ಆಗುತ್ತಲೇ ಇದೆ, ಆ ಭಾಗದ ಜನ ರೊಚ್ಚಿಗೆದ್ದು ತಿರುಗಿ ಬಿದ್ದಿದ್ದಾರೆ. ಜನಾರ್ದನ ಪೂಜಾರಿ ಕಣ್ಣೀರು ಹಾಕಿದ್ದಾರೆ. ಇಡೀ ರಾಜ್ಯದಲ್ಲಿ ಅಪಪ್ರಚಾರ ಆಗುತ್ತಿದೆ. ಈವರೆಗೂ ಒಂದೂ ಶವ ಸಿಕ್ಕಿಲ್ಲ. ಸದನದಲ್ಲಿ ಯಾವ ರೀತಿ ಚರ್ಚಿಸಬೇಕು ಎಂದು ಯೋಜಿಸಿದ್ದೇವೆ ಎಂದು ತಿಳಿಸಿದ್ದಾರೆ.