ಶಿವಮೊಗ್ಗ : ಒಬಿಸಿ ವರ್ಗದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದೇನೆ. ಈಗ ಕಾಳಜಿ ವಹಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿರುವುದಕ್ಕೆ ಮಾಜಿ ಸಚಿವ ಕೆ. ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಈಶ್ವರಪ್ಪ, ದೇಶದಲ್ಲಿ ಹಿಂದುಳಿದವರ ಪರಿಸ್ಥಿತಿ ಏನಿದೆ ಎಂಬುದನ್ನು ಕಾಂಗ್ರೆಸ್ ಅರ್ಥ ಮಾಡಿಕೊಂಡಿಲ್ಲ ಹೇಳಿದ್ದಾರೆ.
ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿ ಗುಡಿಸಿಲಿನಲ್ಲಿ ವಾಸಿಸುತ್ತಿದ್ದಾರೆ. ಕೂಲಿ ಮಾಡಿ ಜೀವನ ಮಾಡುತ್ತಿದ್ದಾರೆ. ಈಗ ರಾಹುಲ್ ಗಾಂಧಿಗೆ ತಪ್ಪಿನ ಅರಿವಾಗಿ ಮಾತನಾಡಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಮಾತ್ರ ರಾಹುಲ್ ಗಾಂಧಿ ಹಿಂದುಳಿದವರ ಪರ ಎಂದು ಹೇಳಿದ್ದಾರೆ. ಇದು ಹಿಂದುಳಿದ ವರ್ಗಕ್ಕೆ ಮಾಡಿದ ದ್ರೋಹ ಮತ್ತು ವಂಚನೆ. ಹಾಗಾಗಿ ಇನ್ನು ಮುಂದಾದರೂ ಹಿಂದುಳಿದ ವರ್ಗದವರ ಬಗ್ಗೆ ಕಾಳಜಿ ವಹಿಸಲಿ ಟಾಂಗ್ ನೀಡಿದ್ದಾರೆ.