ಬೆಂಗಳೂರು : ಹೆಚ್‌ಎಸ್‌ಆರ್‌ನಲ್ಲಿ ರಾಗಿ ಮುದ್ದೆ, ನಾಟಿ ಕೋಳಿ ಸಾಂಬಾರ್ ತಿನ್ನುವ ಸ್ಪರ್ಧೆ.ನಾಮುಂದು ತಾಮುಂದು ಎಂದು ಸ್ಪರ್ಧಾಳುಗಳು ಮುದ್ದೆ ನುಂಗುತ್ತಿದ್ದಾರೆ.
ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್‌ನಲ್ಲಿ ನಾಡಗೀತೆ ಶತಮಾನೋತ್ಸವ ಮತ್ತು ವಕೀಲರ ಸಮ್ಮಿಲನ ಕಾರ್ಯಕ್ರಮ ಪ್ರಯುಕ್ತ ವಿಕೇಂಡ್ ನಲ್ಲಿ ನಾಟಿ ಕೋಳಿ ಸಾಂಬಾರ್ ಜೊತೆ ಮುದ್ದೆ ತಿಂದು ಎಂಜಾಯ್ ಮಾಡಿದ್ದಾರೆ. ಮಂಡ್ಯ, ಹಾಸನ, ಕನಕಪುರ, ಚಿತ್ರದುರ್ಗ,ಮೈಸೂರು, ದೊಡ್ಡಬಳ್ಳಾಪುರ, ಚೆನ್ನಪಟ್ಟಣ, ಆನೇಕಲ್ ಸೇರಿದಂತೆ ನಾನಾ ಭಾಗಗಳಿಂದ ಸ್ಪರ್ಧಿಗಳು ಆಗಮಿಸಿದ್ದಾರೆ. ಸ್ಪರ್ಧೆಯಲ್ಲಿ 125 ಮಂದಿ ಪುರುಷರು, 25 ಮಂದಿ ಮಹಿಳೆಯರು ಸೇರಿ ಒಟ್ಟು 150 ಸ್ಪರ್ಧಿಗಳು ಭಾಗಿಯಾಗಿದ್ದಾರೆ.
ಪುರಷರಿಗೆ ಪ್ರಥಮ ಬಹುಮಾನವಾಗಿ ಟಗರು ದ್ವೀತಿಯ ಬಹುಮಾನವಾಗಿ ಕುರಿ, ತೃತೀಯ ಬಹುಮಾನವಾಗಿ ನಾಲ್ಕು ನಾಟಿ ಕೋಳಿ ಹಾಗೂ ಮಹಿಳೆಯರಿಗೆ ಪ್ರಥಮ ಬಹುಮಾನ 32ಇಂಚಿನ ಟಿವಿ ಐದು ಸಾವಿರ ನಗದು ಆಕರ್ಷಕ ಸೀರೆ, ದ್ವೀತಿಯ-ಮಿಕ್ಸರ್ ಗ್ರೈಂಡರ್, 4ಸಾವಿರ ನಗದು, ಸೀರೆ ತೃತೀಯ ಬಹುಮಾನ- ಕಿಚನ್ ಸೆಟ್, 3 ಸಾವಿರ ನಗದು, ಸೀರೆ ನೀಡಲಾಗುವುದು.
ಇದನ್ನೂ ಓದಿ : ಖರ್ಗೆ ತವರಿನಲ್ಲಿ ಯಶಸ್ವಿಯಾಗಿ ನಡೆದ RSS ಪಥಸಂಚಲನ | ಭಗವಾಧ್ವಜ ಹಾರಿಸಿ ಹೆಜ್ಜೆ ಹಾಕಿದ ಕಾರ್ಯಕರ್ತರು



















