ರಾಯಚೂರು: ಮಂತ್ರಾಲಯದ (Mantralaya) ರಾಘವೇಂದ್ರ ಸ್ವಾಮಿ ಮಠದ (Raghavendra swami Mutt) ಕಾಣಿಕೆ ಹುಂಡಿಯಲ್ಲಿ ಭರ್ಜರಿ ಕಾಣಿಕೆ ಹರಿದು ಬಂದಿದೆ.
ಇಂದು ರಾಯರ ಮಂದಿರದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ವೇಳೆ 3,48,69,621 ರೂ. ಕಾಣಿಕೆ ಸಂಗ್ರಹವಾಗಿರುವುದು ಕಂಡು ಬಂದಿದೆ. ಕಳೆದ 30 ದಿನಗಳಲ್ಲಿ ಮಂತ್ರಾಲಯ ಮಠಕ್ಕೆ ಕೋಟ್ಯಂತರ ರೂ. ಕಾಣಿಕೆ ಹರಿದು ಬಂದಿದೆ. ಸಂಗ್ರಹವಾದ ಕಾಣಿಕೆಯಲ್ಲಿ 3,39,35,121 ರೂ. ನಗದು, 9,34,500 ರೂಪಾಯಿ ನಾಣ್ಯಗಳು ಇವೆ ಎನ್ನಲಾಗಿದೆ.
ಅಲ್ಲದೇ, 37.200 ಗ್ರಾಂ ಚಿನ್ನ, 1280 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ. ಕಳೆದ ಎರಡು ದಿನಗಳಿಂದಲೂ ಹುಂಡಿ ಕಾರ್ಯ ನಡೆಸಲಾಗುತ್ತಿತ್ತು.