ನಟ ಸುದೀಪ್ ಅವರ ತಾಯಿ ನಿಧನರಾಗಿದ್ದರ ಹಿನ್ನೆಲೆಯಲ್ಲಿ ತಾರಾಗಣ ಅಂತಿಮ ದರ್ಶನ ಪಡೆಯುತ್ತಿದೆ.
ತಾಯಿಯ ಅಂತಿಮ ದರ್ಶನ ಪಡೆಯಲು ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಕುಟುಂಬ ಸುದೀಪ್ ನಿವಾಸಕ್ಕೆ ಭೇಟಿ ನೀಡಿದೆ. ಈ ವೇಳೆ, ಅಮ್ಮನಿಲ್ಲದ ಜೀವನ ಎಷ್ಟು ಕಷ್ಟ ಅಂತ ಗೊತ್ತಿದೆ ಎಂದು ರಾಘವೇಂದ್ರ ರಾಜಕುಮಾರ್ ಭಾವುಕರಾಗಿ ಮಾತನಾಡಿದ್ದಾರೆ.
ಸುದೀಪ್ ಅವರ ತಾಯಿ, ನಮ್ಮ ತಾಯಿ ಸ್ನೇಹಿತೆಯರು. ಅವರ ಮನೆಗೆ ನಾವು ಆಗಾಗ ಹೋಗಿ ಬರುತ್ತಿದ್ದೇವು. ನಾವು ಹೊರಗಡೆ ಹೋಗುವಾಗ ಅವರ ಆಶೀರ್ವಾದ ಪಡೆದುಕೊಂಡು ಹೋಗುತ್ತಿದ್ದೇವು. ಸುದೀಪ್ ಅವರನ್ನು ನೋಡಿದರೆ ತುಂಬಾ ನೋವಾಗುತ್ತದೆ.ಅಮ್ಮನಿಲ್ಲದ ಜೀವನ ಎಷ್ಟು ಕಷ್ಟ ಅಂತ ನಮಗೆ ಗೊತ್ತಿದೆ. ನಾನು ಅನುಭವಿಸಿದ್ದೇನೆ. ಸುದೀಪ್ ಆ ಕಷ್ಟ, ನೋವು ಹೇಗೆ ತೆಡೆದುಕೊಳ್ತಾರೋ ಏನೋ ಅನಿಸುತ್ತಿದೆ ಎಂದಿದ್ದಾರೆ.
ಈ ವೇಳೆ ಹಲವಾರು ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿದಂತೆ ಗಣ್ಯರು, ಅಭಿಮಾನಿಗಳು ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.