ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಯಶ್ ಜೋಡಿಗೆ ಬಹಳ ದೊಡ್ಡ ಅಭಿಮಾನಿ ಬಳಗವೇ ಇದೆ. ಇವರಿಬ್ಬರನ್ನು ತೆರೆ ಮೇಲೆ ನೋಡುವುದೇ ಫ್ಯಾನ್ಸ್ ಗೆ ಹಬ್ಬ. ಇದೀಗ ಗಂಡ ಯಶ್ ಜೊತೆಗಿನ ಕೆಲವು ಬ್ಯೂಟಿಫುಲ್ ಫೋಟೋಗಳನ್ನು ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ನಟನೆಯಿಂದ ದೂರವಿದರೂ ಆಗಾಗ ಇನ್ಟಾಗ್ರಾಂ ನಲ್ಲಿ ಆ್ಯಕ್ಟೀವ್ ಆಗಿರುವ ಇವರು, ಪತಿ ಯಶ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ರಾಧಿಕಾ ದಾಂಪತ್ಯದ ಬಗ್ಗೆ ಪಾಠ ಮಾಡಿದ್ದಾರೆ. “ಸಂಬಂಧದಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ ನೀವು ಒಟ್ಟಿಗೆ ಏನು ಮಾಡುತ್ತೀರಿ ಎಂಬುದು ಅಲ್ಲ, ಆದರೆ ನೀವು ಮೌನವಾಗಿ ಏನು ಅರ್ಥಮಾಡಿಕೊಳ್ಳುತ್ತೀರಿ ಎಂಬುದು” ಎಂದು ರಾಧಿಕಾ ಪಂಡಿತ್ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಈ ಮೂಲಕ ಸಂಸಾರದಲ್ಲಿ ಖುಷಿಯಾಗಿರೋದರ ಗುಟ್ಟು ತಿಳಿಸಿದ್ದಾರೆ.
ಇವರಿಬ್ಬರ ಫೋಟೋಗೆ ಅವರ ಫ್ಯಾನ್ಸ್ ಕಾದು ಕುಳಿತಿರುತ್ತಾರೆ. ಸದ್ಯ ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್, ಗಂಡ ಯಶ್ ಜೊತೆಗಿನ ಕೆಲ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದ್ದಂತೆ, ಬೆಸ್ಟ್ ಗಂಡ ಮತ್ತು ಬೆಸ್ಟ್ ಹೆಂಡತಿ. ಕನಸಿನಂತೆ ಕ್ಷಣಗಳನ್ನು ಬದುಕುತ್ತಿದ್ದಾರೆ. ಇದು ಕೇವಲ ಚಿತ್ರಗಳಲ್ಲ, ಭಾವನೆಗಳು. ಪವರ್ಫುಲ್ ಕಪಲ್. ಎಂದೆಂದಿಗೂ ಮಿಸ್ಟರ್ ಮಿಸಸ್ ರಾಮಾಚಾರಿ” ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್ಗಳನ್ನು ಬರೆದುಕೊಂಡಿದ್ದಾರೆ.
ನಟಿ ರಾಧಿಕಾ ಪಂಡಿತ್ ಅವರು ನಟನೆಯಿಂದ ದೂರವಿದ್ರೂ ಆಗಾಗ, ಗಮನ ಸೆಳೆಯುತ್ತಾರೆ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಯಶ್ ಮತ್ತು ರಾಧಿಕಾ ಜೋಡಿ 2016ರಲ್ಲಿ ಮದುವೆಯಾದರು. ಇವರ ದಾಂಪತ್ಯಕ್ಕೆ ಇಬ್ಬರು ಮಕ್ಕಳು ಸಾಕ್ಷಿಯಾಗಿದ್ದಾರೆ. ಯಶ್ ಅವರು ಈಗಾಗಲೇ ʻಮಾಸ್ಟರ್ ಮೈಂಡ್ ಕ್ರಿಯೇಷನ್ಸ್ʼ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದ್ದಾರೆ. ಈ ಬ್ಯಾನರ್ ಅಡಿಯಲ್ಲಿ ʻಟಾಕ್ಸಿಕ್ʼ ಸಿನಿಮಾಗೂ ಯಶ್ ಬಂಡವಾಳ ಹೂಡುತ್ತಿದ್ದಾರೆ. ಇತ್ತ ಅವರ ತಾಯಿ ಪುಷ್ಪ ಅರುಣ್ ಕುಮಾರ್ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ಟೀಸರ್ ಲಾಂಚ್ ಆಗಿದೆ. ಸಿನಿಮಾದ ಟೀಸರ್ ಅನ್ನು ನಟ ಶರಣ್ ಲಾಂಚ್ ಮಾಡಿ ಇಡೀ ʻಕೊತ್ತಲವಾಡಿʼ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.