ಬೆಂಗಳೂರು | ಇಂದು ನಟಿ ರಾಧಿಕಾ ಪಂಡಿತ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ದಿನವನ್ನು ಅಭಿಮಾನಿಗಳ ಜೊತೆ ವಿಶೇಷವಾಗಿ ನಟಿ ಆಚರಿಸಿಕೊಂಡಿದ್ದಾರೆ. ರಾಜ್ಯದ ಹಲವು ಮೂಲೆಗಳಿಂದ ಬಂದ ಅಭಿಮಾನಿಗಳು ತಮ್ಮ ಮೆಚ್ಚಿನ ನಟಿಗೆ ಶುಭಾಶಯಗಳ ಸುರಿಮಳೆಯನ್ನೇಗೈದಿದ್ದಾರೆ.
ಸದ್ಯ ಸಿನಿಮಾದಿಂದ ದೂರ ಉಳಿದುರುವ ನಟಿ ರಾಧಿಕಾ ಪಂಡಿತ್, ಮಕ್ಕಳ ಲಾಲನೆ ಪಾಲನೆ ಮಾಡುತ್ತಿದ್ದಾರೆ. ಅವರು ಮತ್ತೆ ಸಿನಿಮಾಕ್ಕೆ ಮರಳಬೇಕು ಎನ್ನುವುದು ಅವರ ಅಭಿಮಾನಿಗಳ ಹಾರೈಕೆಯಾಗಿದೆ.

ನಟನೆ ಬಿಟ್ಟು ಹಲವು ವರ್ಷಗಳಾಗಿದ್ದರೂ ಸಹ ಇಂದಿಗೂ ಕಡಿಮೆ ಆಗಿಲ್ಲ ರಾಧಿಕಾ ಪಂಡಿತ್ ಅವರ ಕ್ರೇಜ್. ಇಂದು ಸಹ ರಾಜ್ಯದ ನಾನಾ ಕಡೆಗಳಿಂದ ರಾಧಿಕಾ ಪಂಡಿತ್ ಅವರನ್ನು ಭೇಟಿ ಆಗಲು ಅಭಿಮಾನಿಗಳು ಆಗಮಿಸಿದ್ದರು. ರಾಧಿಕಾ ಪಂಡಿತ್ ಸಹ ತಮಗಾಗಿ ಬಂದ ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ. ಅಭಿನಿಗಳೊಟ್ಟಿಗೆ ಸೆಲ್ಫಿ ತೆಗೆಸಿಕೊಂಡು ಪ್ರೀತಿಯಿಂದ ತಂದಿದ್ದ ಕೇಕ್ ಕತ್ತರಿಸಿ ಖುಷಿ ಪಟ್ಟಿದ್ದಾರೆ.
ಯಶ್ ಉಡುಗೊರೆ ಏನು?
ಇದೇ ವೇಳೆ ಯಶ್ ಕೊಟ್ಟ ಉಡುಗೊರೆ ಬಗ್ಗೆ ಕೇಳಿದ ಪ್ರಶ್ನೆಗೆ ನಟಿ, ‘ನಮ್ಮ ಪಾಲಿಗೆ ಪರಸ್ಪರ ಸಮಯ ಕೊಟ್ಟುಕೊಳ್ಳುವುದು ದೊಡ್ಡ ಉಡುಗೊರೆ. ವಸ್ತುಗಳ ಉಡುಗೊರೆ ಯಾತ್ತೂ ಮಾಡಲ್ಲ. ಇಬ್ಬರೂ ಜೊತೆಯಾಗಿದ್ದರೆ ಅದಕ್ಕಿಂತ ದೊಡ್ಡ ಉಡುಗೊರೆ ಮತ್ತೊಂದಿಲ್ಲ ಎಂದಿದ್ದಾರೆ.
ಯಶ್ ಅವರ ಅಮ್ಮ ಪುಷ್ಪ ಅರುಣ್ ಕುಮಾರ್ ಸೊಸೆಗೆ ವಿಷ್ ಮಾಡಿದ್ದಾರೆ. ನಮ್ಮ ಅದ್ಭುತ ಸೊಸೆಗೆ ಹುಟ್ಟುಹಬ್ಬದ ಶುಭಾಶಯಗಳು. ನಿನ್ನ ಜೀವನ ಯಾವಾಗಲೂ ಖುಷಿ ಹಾಗೂ ಆಶೀರ್ವಾದಗಳಿಂದ ತುಂಬಿರಲಿ ಎಂದು ಹಾರೈಸಿದ್ದಾರೆ. ಅಷ್ಟೇ ಅಲ್ಲದೆ ಸೊಸೆಯ ಜೊತೆಗಿದ್ದ ಹಳೆಯ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ.
ಇದನ್ನೂ ಓದಿ : 15 ವರ್ಷಗಳ ಬಳಿಕ ಕೊನೆಗೂ ಒಲಿದ ಅದೃಷ್ಟ.. ಶಾರ್ಜಾದಲ್ಲಿ ಭಾರತೀಯ ಚಾಲಕನಿಗೆ 10 ಕೋಟಿ ರೂ. ಲಾಟರಿ!



















