ಬೆಂಗಳೂರು: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಸಚಿವ ಜಮೀರ್ ಅಹ್ಮದ್ ಖಾನ್ ಕರಿಯ ಕುಮಾರಸ್ವಾಮಿ ಎಂದು ಹೇಳಿಕೆ ನೀಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಯಿತು. ಅದು ಚುನಾವಣೆ ಮೇಲೆಯೂ ಪ್ರಭಾವ ಬೀರಿದೆ ಎನ್ನಲಾಗಿದೆ. ಈ ಮಧ್ಯೆ ಅವರ ಹೇಳಿಕೆಯನ್ನು ಸ್ವತಃ ಕಾಂಗ್ರೆಸ್ ನಾಯಕರೇ ವಿರೋಧಿಸಿದ್ದಾರೆ. ಆದರೆ, ಈಗ ನಾಯಕಿ ತೇಜಸ್ವಿನಿಗೌಡ ಅವರು ಈ ವಿವಾದಕ್ಕೆ ತುಪ್ಪ ಸುರಿದಿದ್ದಾರೆ.
ಈ ಹೇಳಿಕೆ ನೀಡಿದ್ದಕ್ಕೆ ಜಮೀರ್ ವಿರುದ್ಧ ಹೈಕಮಾಂಡ್ ಗೆ ದೂರು ನೀಡಲಾಗಿದೆ. ಇದೆಲ್ಲ ತಣ್ಣಗಾಗುವಷ್ಟರಲ್ಲೇ ಕಾಂಗ್ರೆಸ್ ನಾಯಕಿ ತೇಜಸ್ವಿನಿ ಗೌಡ ರಾಧಿಕ ಕರಿಯ ಅಂತ ಕರೆದ್ರೆ ಓಕೆ. ಆದರೆ, ಜಮೀರ್ ಕರೆದರೆ ಯಾಕೆ ಕೋಪ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ತೇಜಸ್ವಿನಿ ಗೌಡ, ಸಂದರ್ಶನದಲ್ಲಿ ನಿಮ್ಮನ್ನು ಕುಮಾರಸ್ವಾಮಿ ಏನೆಂದು ಕರೆಯುತ್ತಾರೆ ಅಂತ ಕೇಳುತ್ತಾರೆ. ಅದಕ್ಕೆ ಚಿನ್ನು ಅಂತ ಕರೆಯುತ್ತಾರೆ ಅಂತಾರೆ. ನೀವು ಏನಂತ ಕರೆಯುತ್ತೀರಾ ಅಂತ ಕೇಳುತ್ತಾರೆ. ಅದಕ್ಕೆ ಕರಿಯ ಅಂತ ಕರೆಯುತ್ತೇನೆ ಎಂದು ಹೇಳುತ್ತಾರೆ ಎಂದು ಹಳೆಯ ವಿಚಾರ ಹೇಳಿ, ಜಮೀರ್ ಹೇಳಿಕೆ ಸಮರ್ಥಿಸಿದ್ದಾರೆ.