ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಶಾಸಕ ಸಿ.ಟಿ. ರವಿ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸದ್ಯ ಈ ವಿಷಯ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ದೊಡ್ಡ ಸಂಘರ್ಷಕ್ಕೆ ಕಾರಣವಾಗಿದ್ದು, ವಿಪಕ್ಷ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.
ಖುದ್ದು ರವಿ ತಮ್ಮನ್ನು ಕೊಲೆ ಮಾಡುವ ಪ್ರಯತ್ನ ನಡೆದಿದೆ ಅಂತ ಹೇಳಿದ್ದಾರೆ, ಯಾವುದೇ ವ್ಯಕ್ತಿಯನ್ನು ಬಂಧಿಸಿದ ಬಳಿಕ ನ್ಯಾಯಾಲಯದ ಮುಂದೆ ಹಾಜರುಡಿಸುವುದು ಸಂವಿಧಾನ ಬದ್ಧ ಕ್ರಮ. ಅದನ್ನು ಬಿಟ್ಟು ಪೊಲೀಸರು ಯಾಕೆ ರವಿಯವರನ್ನು ಕಾಡಿನಲ್ಲಿ ಸುತ್ತಿಸಿದರು? ಅವರನ್ನು ಸುತ್ತಾಡಿಸುತ್ತಿದ್ದ ಜಾಡು ಹಿಡಿದು ಪೀಪಲ್ಸ್ ಫ್ರಂಟ್, ಕೆಎಫ್ಡಿ ಅಥವಾ ಕಾಂಗ್ರೆಸ್ ಪಕ್ಷದ ಸಹೋದದರಾಗಿರುವ ಕುಕ್ಕರ್ ಬ್ರ್ಯಾಂಡ್ ಉಗ್ರರು ದಾಳಿ ನಡೆಸಿದ್ದರೆ ಅದಕ್ಕೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.