ಹಾಸನ: ಸಿಎಂ ಸ್ಥಾನ, ಅಧಿಕಾರ ಹಂಚಿಕೆ ವಿಚಾರವಾಗಿ ಅಶೋಕ್ ಗಿಳಿಶಾಸ್ತ್ರ ಹೇಳುತ್ತಾರೆ ಎಂಬ ವಿಚಾರವಾಗಿ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಆಲೂರು ತಾಲ್ಲೂಕಿನ ಧರ್ಮಪುರಿಯಲ್ಲಿ ಮಾತನಾಡಿದ ಅವರು, ನನ್ನ ಶಾಸ್ತ್ರನೇ ಗಿಜವಾಗಿ ಹೋಯ್ತಲ್ಲ. ನಾನೊಬ್ಬ ಅಲ್ಲ, ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ರಾಮನಗರ ಶಾಸಕ ಹೇಳಿದ್ದಾರಲ್ಲ. ನೋಟಿಸ್ ಕೊಟ್ಟ ಮೇಲೆಯೂ ಏನು ಮಾಡಿಕೊಳ್ಳುತ್ತಾರೋ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ. ಅವರನ್ನೇನು ಸಸ್ಪೆಂಡ್ ಮಾಡ್ತಾರಾ? ಎಂದು ಪ್ರಶ್ನಿಸಿದ್ದಾರೆ.
ರಾಮನಗರ ಶಾಸಕರನ್ನು ಗುಂಡಿಕ್ಕಿ ಹೊಡಿತಾರಾ? ಕಾಂಗ್ರೆಸ್ ನಾಯಕರು ಒಂದು ಕಡೆ ನೋಟಿಸ್ ಕೊಡುತ್ತಾರೆ. ಇನ್ನೊಂದ ಕಡೆ ಅಭಿಮಾನದಿಂದ ಹೇಳಿದ್ದಾರೆ ಸಿಎಂ ಆಗಲಿ ಅಂತಾ ಅಂತಾರೆ. ಅಲ್ಲಿಗೆ ಅರ್ಥಾಯ್ತಲ್ಲ, ಇದೆಲ್ಲ ಮ್ಯಾಚ್ ಫಿಕ್ಸಿಂಗ್ ಅಂತಾ. ಎರಡೂವರೆ ವರ್ಷ, ಎರಡೂವರೆ ವರ್ಷ ಮ್ಯಾಚ್ ಫಿಕ್ಸಿಂಗ್ ಆಗಿದೆ. ಡೇಟ್ ಕೊಟ್ಟಿದ್ದೀನಿ. ಸೆಪ್ಟೆಂಬರ್, ನವೆಂಬರ್ ನಲ್ಲಿ ಎಲ್ಲವೂ ತಿಳಿಯುತ್ತದೆ ಎಂದು ಹೇಳಿದ್ದಾರೆ.
ನಾ ಕಾಂಗ್ರೆಸ್ ನವರಿಗೆ ಓಪನ್ ಚಾಲೆಂಜ್ ಕೊಡ್ತಿದ್ದೀನಿ. ಅನೌನ್ಸ್ ಮಾಡಬೇಕಾದವರು ಯಾರು? ಖರ್ಗೆಯವರ ಬಾಯಲ್ಲಿ ಹೇಳಿಸಿಬಿಡಿ. ನಾವು 5 ವರ್ಷ ಸಿದ್ದರಾಮಯ್ಯನವರೇ ಮುಖ್ಯ ಮಂತ್ರಿ ಅಂತ ಅನೌನ್ಸ್ ಮಾಡಿಸಿ ಎಂದು ಸವಾಲು ಹಾಕಿದ್ದಾರೆ.