ಹಿಮಾಚಲ ಪ್ರದೇಶ : ಪತಿಯ ಮೇಲಿನ ಕೋಪದಲ್ಲಿ ಪತ್ನಿ ಬೆಂಕಿ ಹಚ್ಚಿದ್ದರಿಂದ ಎರಡು ಮನೆಗಳು ಸುಟ್ಟು ಕರಕಲಾದ ಘಟನೆ ರಾಜ್ಯದ ಮಣಿಕರಣ್ ಕಣಿವೆಯ ದಧೇಯ್ ಗ್ರಾಮದಲ್ಲಿ ನಡೆದಿದೆ.
ದಧೇಯ್ ಗ್ರಾಮದ ಸ್ಥಳೀಯ ನಿವಾಸಿಯಾದ ಮಹಿಳೆ ಮತ್ತು ಆಕೆಯ ಪತಿ ನಡುವೆ ನಿರಂತರವಾಗಿ ಜಗಳವಾಗುತ್ತಿತ್ತು. ಪತಿಯ ಮೂರನೇ ಮದುವೆ ವಿಚಾರ ಕೇಳಿದ ಪತ್ನಿ, ತನ್ನ ಸಂಬಂಧಿಕರೊಂದಿಗೆ ಸೇರಿ ಮನೆಗೆ ಬೆಂಕಿ ಹಚ್ಚಿದ್ದಾಳೆ. ಬೆಂಕಿ ವೇಗವಾಗಿ ಮನೆ ಹಾಗೂ ಪಕ್ಕದ ಮನೆಯನ್ನು ಆವರಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ಪೊಲೀಸರು ದೃಢಪಡಿಸಿಲ್ಲ.
ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಡಿಸೆಂಬರ್ 24ರ ವರೆಗೆ ಪೊಲೀಸ್ ಕಸ್ಟಡಿಯಲ್ಲಿರುವಂತೆ ಆದೇಶ ನೀಡಿದೆ.
ಇದನ್ನೂ ಓದಿ : ನೋಡು ನೋಡುತ್ತಿದ್ದಂತೆ ಧಗಧಗನೇ ಹೊತ್ತಿ ಉರಿದ ಮಾರುತಿ 800 ಕಾರು



















