ಹೈದರಾಬಾದ್: ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಅವರು (PV Sindhu) ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಹೀಗಾಗಿ ಮುಂಬರುವ ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ತಂಡ ಚಾಂಪಿಯನ್ಶಿಪ್(Badminton Asia Mixed Team Championship) ಆಡುವುದಿಲ್ಲ ಎಂದು ಹೇಳಿದ್ದಾರೆ. ಕಳೆದ ಡಿಸೆಂಬರ್ನಲ್ಲಿ ಮದುವೆಯಾಗಿದ್ದ ಅವರು ಉತ್ತಮ ಅಭಿಯಾನದ ಕನಸು ಕಾಣುತ್ತಿದ್ದರು. ಆದರೆ, ಅವರಿಗೆ ಗಾಯದ ಸಮಸ್ಯೆ ಅಡಚಣೆ ಉಂಟು ಮಾಡಿದೆ.
ಸಿಂಧೂ ಅವರ ಅಲಭ್ಯತೆಯಿಮದಾಗಿ ಪಂದ್ಯಾವಳಿಯಲ್ಲಿ ಭಾರತದ ಪದಕ ಗೆಲ್ಲುವ ಸಾಧ್ಯತೆಯನ್ನು ಕ್ಷೀಣಿಸುವಂತೆ ಮಾಡಿದೆ. ಜನವರಿಯಲ್ಲಿ ನಡೆದ ಇಂಡೋನೇಷ್ಯಾ ಮಾಸ್ಟರ್ಸ್ನಲ್ಲಿಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಪಿವಿ ಸಿಂಧು, ವಿಯೆಟ್ನಾಂನ ಟಿಎಲ್ ನ್ಗುಯೆನ್ ವಿರುದ್ಧ 32ನೇ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದರು.
ಇದನ್ನೂ ಓದಿ: ಎರಡು ಐಸಿಸಿ ಪ್ರಶಸ್ತಿ ರೇಸ್ ನಲ್ಲಿ ಬುಮ್ರಾ ಹೆಸರು!
ಫೆಬ್ರವರಿ 11 ರಿಂದ 16ರ ತನಕ ಪೂರ್ವ ಚೀನಾದ ಕ್ವಿಂಗ್ಡಾವೊದಲ್ಲಿ ನಡೆಯಲಿರುವ ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ತಂಡ ಚಾಂಪಿಯನ್ಶಿಪ್ಗೆ ಭಾರತೀಯ ಶಟ್ಲರ್ಗಳು ಈಗಾಗಲೇ ತೆರಳಿದ್ದಾರೆ. ಕಳೆದ ಆವೃತ್ತಿಯಲ್ಲಿ ಭಾರತ, ಮಿಶ್ರ ತಂಡ ಚಾಂಪಿಯನ್ಶಿಪ್ನಲ್ಲಿಸೆಮಿಫೈನಲ್ನಲ್ಲಿ ಚೀನಾ ವಿರುದ್ಧ 2-3 ಅಂತರದಿಂದ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಪಿವಿ ಸಿಂಧುಗೆ ಆಗಿದ್ದೇನು?
ಟೂರ್ನಿಯಿಂದ ಹಿಂದೆ ಸರಿದಿರುವ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಸಿಂಧು, ಪೋಸ್ಟ್ ಹಂಚಿಕೊಂಡಿದ್ದಾರೆ. ಎಲ್ಲರಿಗೂ ನಮಸ್ಕಾರ, ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ತಂಡ ಚಾಂಪಿಯನ್ಶಿಪ್ 2025 ಗಾಗಿ ಭಾರತೀಯ ತಂಡದೊಂದಿಗೆ ಪ್ರಯಾಣಿಸುವುದಿಲ್ಲ ಎಂದು ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತಿದ್ದೇನೆ. ಗುವಾಹಟಿಯಲ್ಲಿತರಬೇತಿ ಪಡೆಯುತ್ತಿದ್ದಾಗ, ನನ್ನ ಮಂಡಿರಜ್ಜು ನೋವು ಕಾಣಿಸಿಕೊಂಡಿದೆ. ನನ್ನ ದೇಶಕ್ಕಾಗಿ ಆಡಲು ಸಾಕಷ್ಟು ಪ್ರಯತ್ನಿಸಿದೆ. ಅದಕ್ಕಾಗಿ ಚೇತರಿಸಿಕೊಳ್ಳಲು ಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ ಎಂದು ಹೇಳಿದ್ದಾರೆ.
2022ರ ಬರ್ಮಿಂಗ್ಹ್ಯಾಮ್ನ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮೊದಲ ಮಹಿಳಾ ಸಿಂಗಲ್ಸ್ ಚಿನ್ನ ಗೆದ್ದಾಗಿನಿಂದ ಸಿಂಧು ಅವರು ಸತತ ಗಾಯಗಳಿಂದ ಬಳಲುತ್ತಿದ್ದಾರೆ. ಆ ವರ್ಷದಲ್ಲೇ ನಾಲ್ಕು ತಿಂಗಳು ವಿಶ್ರಾಂತಿ ಪಡೆದ ನಂತರ ಜನವರಿಯಲ್ಲಿ ನಡೆದ 2023ರ ಮಲೇಷ್ಯಾ ಓಪನ್ಗೆ ಮರಳಿದ್ದರು. , ಸ್ಪೇನ್ನ ಕೆರೊಲಿನಾ ಮರಿನ್ ವಿರುದ್ಧ ಸೋತ ನಂತರ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು.
ಫೆಬ್ರವರಿ 12ರಿಂದ ಭಾರತದ ಆಭಿಯಾನ ಆರಂಭ
ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ತಂಡ ಚಾಂಪಿಯನ್ಶಿಪ್ನಲ್ಲಿ ದಕ್ಷಿಣ ಕೊರಿಯಾ ಮತ್ತು ಮಕಾವು ತಂಡಗಳೊಂದಿಗೆ ಗ್ರೂಪ್ ಡಿಯಲ್ಲಿ ಭಾರತ ತಂಡ ಸ್ಥಾನ ಪಡೆದಿದೆ. ಫೆಬ್ರವರಿ 12 ರಂದು ತಮ್ಮ ಅಭಿಯಾನವನ್ನು ಆರಂಭಿಸಲಿದ್ದು, ಫೆಬ್ರವರಿ 13 ರಂದು ದಕ್ಷಿಣ ಕೊರಿಯಾ ವಿರುದ್ಧ ಕಠಿಣ ಹೋರಾಟ ನಡೆಸಲಿದೆ.